ಕರ್ನಾಟಕದ ಇಬ್ಬರು ಯುವವೇಗಿಗಳಿಗೆ ಜೆಫ್ ಥಾಮ್ಸನ್ ತರಬೇತಿ

ಗುರುವಾರ, 9 ಜೂನ್ 2016 (12:09 IST)
ಕರ್ನಾಟಕದ ಯುವ ವೇಗಿಗಳಾದ ಡೇವಿಡ್ ಮ್ಯಾಥಿಯಾಸ್ ಮತ್ತು ಪ್ರಸಿದ್ ಕೃಷ್ಣ ಅವರು ಬ್ರಿಸ್ಬೇನ್‌ನಲ್ಲಿ ಮೂರು ವಾರಗಳ ತರಬೇತಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ನಾಲ್ವರು ಬೌಲರುಗಳಲ್ಲಿ ಸೇರಿದ್ದಾರೆ. ಕಳೆದ ಸೀಸನ್‌ನಲ್ಲಿ ರಣಜಿ ಟ್ರೋಫಿಗೆ ಚೊಚ್ಚಲ ಪ್ರವೇಶ ಮಾಡಿರುವ ಇಬ್ಬರು ಆಟಗಾರರು ಐಡಿಬಿಐ ಫೆಡರಲ್ ಕೆಎಸ್‌ಸಿಎ ಬೌಲಿಂಗ್ ಪ್ರತಿಷ್ಠಾನದ ಭಾಗವಾಗಿದ್ದಾರೆ.

ಇವರಿಬ್ಬರಲ್ಲದೇ ಪ್ರತಿಷ್ಠಾನವು ಮುಂಬೈನ ತುಷಾರ್ ದೇಶಪಾಂಡೆ ಮತ್ತು ಮಿನದ್ ಮಂಜ್ರೇಕರ್ ಅವರನ್ನು ಕೂಡ ಕಳಿಸಲಿದೆ. ಆಸ್ಟ್ರೇಲಿಯಾದ ವೇಗಿ ಲೆಜೆಂಡ್ ಜೆಫ್ ಥಾಮ್ಸನ್ ಅವರ ಮಾರ್ಗದರ್ಶನದಲ್ಲಿ ನಾಲ್ವರು ಬೌಲರುಗಳು ತರಬೇತಿ ಪಡೆಯಲಿದ್ದಾರೆ. ಜೆಫ್ ಥಾಮ್ಸನ್ ಪ್ರತಿಷ್ಠಾನದ ಹೆಡ್ ಕೋಚ್ ಕೂಡ ಆಗಿದ್ದಾರೆ. 
 
ಯುವ ಆಟಗಾರರಿಗೆ ತರಬೇತಿ ನೀಡುವ ಕುರಿತು ಹೇಳಿದ ಥಾಮ್ಸನ್, ನಾನು ಡೇವಿಡ್ ಕಾಪರ್‌ಫೀಲ್ಡ್ ಅಲ್ಲ ಅಥವಾ ಮಾಂತ್ರಿಕನೂ ಅಲ್ಲ. ನಾನು ಏನು ಮಾಡಬೇಕೆಂದು ಅವರಿಗೆ ಕಲಿಸುತ್ತೇನೆ. ಇನ್ನುಳಿದಿದ್ದು ಅವರ ಪರಿಶ್ರಮವನ್ನು ಅವಲಂಬಿಸಿದೆ. ಅವರೆಲ್ಲಾ ಸುಧಾರಿಸಿದ್ದು, ಯಾವುದೇ ಸವಾಲಿಗೆ ಹೊಂದಿಕೊಳ್ಳುವಂತೆ ಅವರನ್ನು ಸಿದ್ಧಪಡಿಸುವುದು ನಮ್ಮ ಕೆಲಸವಾಗಿದೆ. ಇಂದಿನ ದಿನಗಳಲ್ಲಿ ಕ್ರಿಕೆಟ್ ಕಠಿಣ ಆಟವಾಗಿದ್ದು, ಅವರು ನಮ್ಮ ಕಾಲಕ್ಕಿಂತ ಹೆಚ್ಚು ಕಠಿಣ ಮನಸ್ಕರಾಗಿರಬೇಕು ಎಂದು ಥಾಮ್ಸನ್ ಹೇಳಿದರು.
 
ಇದೇ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದ ಪ್ರತಿಷ್ಠಾನವು ವೇಗಿಗಳು ಮತ್ತು ಸ್ಪಿನ್ನರುಗಳಿಗೆ ತರಬೇತಿ ನೀಡುತ್ತಿದೆ. ತನ್ನನ್ನು ಪರಿಪಕ್ವ ಆಟಗಾರನಾಗಿ ಈ ಕಾಲಾವಧಿ ರೂಪಿಸುತ್ತದೆಂದು ಪ್ರಸಿಧ್ ನಂಬಿದ್ದಾರೆ. ಇದೊಂದು ಮಹಾನ್ ಅವಕಾಶವಾಗಿದ್ದು, ಕ್ರಿಕೆಟ್ ಮುಂದಿನ ಮಟ್ಟಕ್ಕೆ ಒಯ್ಯಲು ಇದೊಂದು ಸಿದ್ಧತೆಯಾಗಿದೆ ಎಂದು ಹೇಳಿದ್ದಾರೆ.

ನಗರಕ್ಕೆ 2ನೇ ಭೇಟಿ ನೀಡುತ್ತಿರುವ ಥಾಮ್ಸನ್ ಬೀರಿದ ಪ್ರಭಾವ ಕುರಿತು ಮಾತನಾಡುತ್ತಾ, ಏನೇ ಆಗಿರಲಿ ನಮ್ಮನ್ನು ನಾವು ನಂಬುವಂತೆ ಅವರು ಹೇಳುತ್ತಿದ್ದರು. ತಾಂತ್ರಿಕವಾಗಿ ನನ್ನ ಎಡಗೈ ನನ್ನ ಮುಖಕ್ಕೆ ಅಡ್ಡಬಂದು ದೃಷ್ಟಿಗೆ ತಡೆ ಹಾಕುತ್ತಿತ್ತು. ಅದನ್ನು ಸರಿಪಡಿಸಲು ಥಾಮ್ಸನ್ ನೆರವಾದರು. ಉತ್ತಮ ಶೈಲಿಯೊಂದಿಗೆ ಸ್ವಿಂಗ್ ಮತ್ತು ಪೇಸ್ ಸುಧಾರಣೆಯಾಗಿದೆ ಎಂದು ಪ್ರಸಿಧ್ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ