ಐಪಿಎಲ್ ಆರಂಭಕ್ಕೂ ಮೊದಲೇ ಡೆಲ್ಲಿ ಡೇರ್ ಡೆವಿಲ್ಸ್ ಗೆ ಶಾಕ್
ಗೌತಮ್ ಗಂಭೀರ್ ನೇತೃತ್ವದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಾಳೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಲಿದೆ. ಆದರೆ ಇದಕ್ಕೂ ಮೊದಲೇ ನಂ.1 ಬೌಲರ್ ಕಗಿಸೋ ರಬಾಡಾ ರೂಪದಲ್ಲಿ ಆಘಾತ ಸಿಕ್ಕಿದೆ.
ದ.ಆಫ್ರಿಕಾ ವೇಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದು, ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ರಬಾಡಾ ಸ್ಥಾನಕ್ಕೆ ಹೊಸ ಆಟಗಾರನನ್ನು ದೆಹಲಿ ತಂಡ ಪ್ರಕಟಿಸಬೇಕಾಗಿದೆ. 4.2 ಕೋಟಿ ರೂ. ಗೆ ರಬಾಡಾರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಖರೀದಿ ಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.