ಆ ಮೂರು ವಾರ ನನ್ನ ಕ್ರಿಕೆಟ್ ಕಿಟ್ ಕಡೆ ತಿರುಗಿಯೂ ನೋಡಿರಲಿಲ್ಲ ಎಂದ ವಿರಾಟ್ ಕೊಹ್ಲಿ!
‘ದ.ಆಫ್ರಿಕಾ ಪ್ರವಾಸದ ಕೊನೆ ಕೊನೆಯಲ್ಲಿ ನಾನು ತುಂಬಾ ಬಳಲಿದ್ದೆ. ನನಗೆ ವಿಶ್ರಾಂತಿ ಬೇಕು ಎಂದು ಅನಿಸಿತ್ತು. ಅದಕ್ಕೇ ಕ್ರಿಕೆಟ್ ನಿಂದ ದೂರವಿದ್ದೆ. ಈ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಕ್ರಿಕೆಟ್ ನಿಂದ ದೂರವಿದ್ದೆ. ಆದರೆ ಟಿವಿಯಲ್ಲಿ ಆಗಾಗ ಬರುವ ಕ್ರಿಕೆಟ್ ಸ್ಕೋರ್ ಗಳನ್ನು ನೋಡುತ್ತಿದ್ದೆ ಅಷ್ಟೆ. ಅದು ಬಿಟ್ಟರೆ ಕ್ರಿಕೆಟ್ ಕಡೆಗೆ ಗಮನವೇ ಕೊಡಲಿಲ್ಲ. ಈಗ 100 ಪ್ರತಿಶತ ರೆಡಿಯಾಗಿದ್ದೇನೆಂದು ಅನಿಸುತ್ತಿದೆ’ ಎಂದು ಕೊಹ್ಲಿ ಮಾಧ್ಯಮಗಳ ಎದುರು ಹೇಳಿದ್ದಾರೆ.
ಈ ಮೂರು ವಾರ ಕ್ರಿಕೆಟ್ ಕಿಟ್ ಕಡೆಗೂ ನಾನು ನೋಡಿರಲಿಲ್ಲ. ಸುಮಾರು ಒಂದೂವರೆ ತಿಂಗಳು ಕ್ರಿಕೆಟ್ ಆಡಿಯೇ ಇಲ್ಲ. ಈಗ ಸಂಪೂರ್ಣವಾಗಿ ಫಿಟ್ ಆಗಿದ್ದೆನೆಂದು ಅನಿಸುತ್ತಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.