ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ಸರ್ಜರಿ ಇನ್ ಭರ್ಜರಿ!

ಶುಕ್ರವಾರ, 6 ಜನವರಿ 2017 (09:36 IST)
ಬೆಂಗಳೂರು: ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಕ್ರಿಕೆಟ್ ಸಂಸ್ಥೆ ಲೋಧಾ ಸಮಿತಿಯ ವರದಿಗಳನ್ನು ಜಾರಿ ಮಾಡಲು ಮುಂದಾಗಿದೆ. ಅದರಂತೆ ಪ್ರಮುಖ ಹುದ್ದೆಗಳಿಗೆ ಅರ್ಹರನ್ನು ನೇಮಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಕೆಎಸ್ ಸಿಎ ಅಧ್ಯಕ್ಷ, ಕಾರ್ಯದರ್ಶಿಗಳು ರಾಜೀನಾಮೆ ನೀಡಿದ್ದರು. ಇದೀಗ ಸಂಜಯ್ ದೇಸಾಯಿ ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿದ್ದು, ಸುಧಾಕರ ರಾವ್ ಕಾರ್ಯದರ್ಶಿ, ಶ್ರೀನಿವಾಸ ಮೂರ್ತಿ ಖಜಾಂಜಿಯಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಸಭೆ ಸೇರಿದ ಪದಾದಿಕಾರಿಗಳು ನೂತನ ಆಡಳಿತಾಧಿಕಾರಿಗಳನ್ನು ಆಯ್ಕೆ ಮಾಡಿತು. ಕೆಎಸ್ ಸಿಎಗೆ ಮುಂದಿನ ಚುನಾವಣೆ ನಡೆಯುವವರೆಗೂ ಇವರೆಲ್ಲಾ ಅಧಿಕಾರದಲ್ಲಿರಲಿದ್ದಾರೆ. ಮೊನ್ನೆಯಷ್ಟೇ ರಾಜ್ಯ ಕ್ರಿಕೆಟ್ ಅಧ್ಯಕ್ಷ ಅಶೋಕಾನಂದ್ ಮತ್ತು ದಯಾನಂದ್ ಪೈ 70 ವರ್ಷ ದಾಟಿದವರೆಂಬ ಹಿನ್ನಲೆಯಲ್ಲಿ ಹುದ್ದೆ ಕಳೆದುಕೊಳ್ಳಬೇಕಾಯಿತು. ಇನ್ನು ಕಾರ್ಯದರ್ಶಿ ಬ್ರಿಜೇಶ್ ಪಟೇಲ್ 9 ವರ್ಷ ಈಗಾಗಲೇ ಅಧಿಕಾರ ಪೂರೈಸಿದವರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ