ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾದಿಂದ ಕರುಣ್ ನಾಯರ್, ಮುರಳಿ ವಿಜಯ್ ಗೆ ಹೇಳದೇ ಕೇಳದೇ ಕೊಕ್ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕೇದಾರ್ ಜಾದವ್ ವಿಚಾರವಾಗಿ ಬಿಸಿಸಿಐ ಆಯ್ಕೆ ಸಮಿತಿ ಅಂತಹದ್ದೇ ವಿವಾದಕ್ಕೆ ಗುರಿಯಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಏಕದಿನ ಪಂದ್ಯಗಳಿಗೆ ಕೇದಾರ್ ಜಾದವ್ ರನ್ನು ಕಾರಣವಿಲ್ಲದೇ ಹೊರಗಿಟ್ಟಿರುವುದು ವಿವಾದ ಹುಟ್ಟು ಹಾಕಿದೆ. ನನ್ನನ್ನು ಯಾವ ಕಾರಣಗಳಿಗೆ ಹೊರಗಿಡಲಾಯಿತು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಜಾದವ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಜಾದವ್ ರನ್ನು ವಿಂಡೀಸ್ ವಿರುದ್ಧ ಆಡಿಸದೇ ಈಗ ಕೊಕ್ ನೀಡಲಾಗಿದೆ. ಕರುಣ್ ನಾಯರ್ ಗೂ ಇದೇ ರೀತಿ ಮಾಡಲಾಗಿತ್ತು. ಮೊದಲು ಜಾದವ್ ಗೆ ಕೊಕ್ ನೀಡಿದ್ದಕ್ಕೆ ಫಿಟ್ ನೆಸ್ ನೆಪ ಹೇಳಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಬಳಿಕ ದೇಶೀಯ ಪಂದ್ಯಗಳಲ್ಲಿ ಆಡಿ ಸಾಮರ್ಥ್ಯ ಸಾಬೀತು ಪಡಿಸಲಿ ಎಂದಿದ್ದಾರೆ. ಈ ಗೊಂದಲಗಳಿಂದಾಗಿ ಅನ್ಯಾಯವಾಗಿರುವುದು ಕೇದಾರ್ ಜಾದವ್ ಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.