ರೋಹಿತ್ ಶರ್ಮಾರನ್ನು ಹೊಗಳಿದ್ದ ಹರ್ಭಜನ್ ಸಿಂಗ್ ಇಂದು ವರಸೆಯೇ ಬದಲು!
ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೊಹ್ಲಿ ಇಬ್ಬರೂ ಶತಕ ಗಳಿಸಿದ್ದರು. ಆದರೆ ರೋಹಿತ್ ರ ಇನಿಂಗ್ಸ್ ನೋಡಿ ಕೊಹ್ಲಿಗಿಂತಲೂ ಹೆಚ್ಚು ಟ್ಯಾಲೆಂಟೆಡ್ ರೋಹಿತ್ ಎಂದಿದ್ದ ಭಜಿ ಇದೀಗ ಕೊಹ್ಲಿಯೇ ಭಾರತದ ದೊಡ್ಡ ಲೆಜೆಂಡ್ ಕ್ರಿಕೆಟಿಗ ಎಂದು ಹೊಗಳಿದ್ದಾರೆ. ಆ ಮೂಲಕ ತಮ್ಮ ವರಸೆಯೇ ಬದಲಿಸಿದ್ದಾರೆ.
ಸಚಿನ್, ದ್ರಾವಿಡ್, ಗಂಗೂಲಿಯವರ ದಾಖಲೆ ಹಿಂದಿಕ್ಕಿದ ಕೊಹ್ಲಿ ಈಗ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿರುವ ಲೆಜೆಂಡ್ ಎಂದು ಭಜಿ ಟ್ವೀಟ್ ಮೂಲಕ ಟೀಂ ಇಂಡಿಯಾ ನಾಯಕನನ್ನು ಹಾಡಿ ಹೊಗಳಿದ್ದಾರೆ.