ಅರ್ಧಶತಕವೊಂದೇ ಸಾಕೆನಗೆ ಎಂದ ಕೆಎಲ್ ರಾಹುಲ್ ! ಟೀಂ ಇಂಡಿಯಾ 120/1

ಶುಕ್ರವಾರ, 17 ಮಾರ್ಚ್ 2017 (16:38 IST)
ರಾಂಚಿ: ದ್ವಿತೀಯ ಟೆಸ್ಟ್ ಮುಗಿದ ಮೇಲೆ ಕೆಎಲ್ ರಾಹುಲ್ ಬಳಿ ಯಾಕಪ್ಪಾ ನಿನಗೆ ಅರ್ಧಶತಕಕ್ಕಿಂತ ಜಾಸ್ತಿ ಸ್ಕೋರ್ ಮಾಡುವ ಆಸೆಯಿಲ್ಲವೇ ಎಂದು ಕಮೆಂಟೇಟರ್ ರವಿ ಶಾಸ್ತ್ರಿ ಕೇಳಿದ್ದರು. ಅದಕ್ಕೆ ನನಗೆ ತಂಡಕ್ಕೆ ಉತ್ತಮ ಕೊಡುಗೆ ನೀಡುವುದೇ ಮುಖ್ಯವೆಂದಿದ್ದರು ರಾಹುಲ್. ಇಂದೂ ಕೂಡಾ ಅದನ್ನು ಮತ್ತೊಮ್ಮೆ ಸಾಬೀತು ಮಾಡಿ ಪೆವಿಲಿಯನ್ ಗೆ ಮರಳಿದರು.

 

ಆರಂಭದಿಂದಲೂ ತಮ್ಮ ಎಂದಿನ ಬಿರುಸಿನ ಶೈಲಿಯಲ್ಲಿ ರನ್ ಕಲೆ ಹಾಕಿದ ರಾಹುಲ್ 67 ರನ್ ಗಳಿಸಿ ಔಟಾದರು. ಈ ಸರಣಿಯಲ್ಲಿ ಇದು ರಾಹುಲ್ ಬಾರಿಸಿದ ನಾಲ್ಕನೇ ಅರ್ಧಶತಕ. ಯಾಕೋ ಇಂದೂ ಕೂಡಾ ಅರ್ಧಶತಕ ಗಳಿಸಿದ ಮೇಲೆ ಎಡವಿದರು.

 
ಆದರೆ ಇನ್ನೊಂದು ತುದಿಯಲ್ಲಿದ್ದ ಮರಳಿ ವಿಜಯ್ ಆರಂಭದಿಂದಲೂ ನಿಧಾನ ಗತಿಯಲ್ಲೇ ರನ್ ಪೇರಿಸುತ್ತಾ ಸಾಗಿದರು. 450 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟುವಾಗ ಹೇಗೆ ಬ್ಯಾಟ್ ಮಾಡಬೇಕೋ ಅದೇ ರೀತಿಯಲ್ಲಿ ಸಾಗಿದರು. ದಿನದಂತ್ಯಕ್ಕೆ ಅವರು 42 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅವರ ಜತೆಗೆ ಬಂದ ಚೇತೇಶ್ವರ ಪೂಜಾರ 10 ರನ್ ಗಳಸಿ ಕ್ರೀಸ್ ನಲ್ಲಿದ್ದಾರೆ. ಭಾರತೀಯ ತಂಡಕ್ಕೆ ನಾಯಕ ಕೊಹ್ಲಿ ಗಾಯದ್ದೇ ಪ್ರಮುಖ ಚಿಂತೆ. ಕೊಹ್ಲಿಗೆ ಎಂದಿನಂತೆ ಬ್ಯಾಟಿಂಗ್ ನಡೆಸಲು ಕಷ್ಟವಾಗಬಹುದು. ಹೀಗಾಗಿ ಉಳಿದ ಬ್ಯಾಟ್ಸ್ ಮನ್ ಗಳು ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುತ್ತಿದ್ದಾರೆ.

 
ಈ ಪಿಚ್ ಕಳೆದೆರಡು ಪಂದ್ಯಗಳಂತೆ ಸಂಪೂರ್ಣವಾಗಿ ಬೌಲರ್ ಗಳ ಪಿಚ್ ಅಲ್ಲದಿರುವುದರಿಂದ ಕೊಂಚ ಸಮಧಾನಕರ ವಿಷಯ.  ದಿನದಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತ್ತು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ