KL Rahul Daughter: ಬರ್ತ್ ಡೇ ದಿನ ಮಗಳ ಹೆಸರು ರಿವೀಲ್ ಮಾಡಿದ ಕೆಎಲ್ ರಾಹುಲ್: ಈ ಹೆಸರಿನಲ್ಲಿದೆ ಒಂದು ವಿಶೇಷ

Krishnaveni K

ಶುಕ್ರವಾರ, 18 ಏಪ್ರಿಲ್ 2025 (16:07 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಇಂದು ತಮ್ಮ ಜನ್ಮದಿನದಂದೇ ಮಗಳ ಹೆಸರು ರಿವೀಲ್ ಮಾಡಿದ್ದಾರೆ. ಈ ಹೆಸರಿನಲ್ಲಿ ಒಂದು ವಿಶೇಷವೂ ಇದೆ.

ಇತ್ತೀಚೆಗಷ್ಟೇ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಮಗುವಿಗೆ ಒಂದು ತಿಂಗಳು ತುಂಬಿದೆ. ಇಂದು ರಾಹುಲ್ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದೇ ಮಗಳ ಹೆಸರು ಬಹಿರಂಗಪಡಿಸಿದ್ದಾರೆ.

ಕೆಎಲ್ ರಾಹುಲ್ ಮಗಳಿಗೆ ‘ಇವಾರಾ’ ಎಂದು ಹೆಸರಿಡಲಾಗಿದೆ. ಇವಾರಾ ಎಂದರೆ ದೇವರ ಉಡುಗೊರೆ ಎಂದರ್ಥ. ನಮ್ಮ ಮಗಳು, ನಮ್ಮ ಸರ್ವಸ್ವ ‘ಇವಾರಾ’ ಎಂದು ಪತ್ನಿ, ಮಗಳ ಜೊತೆಗಿರುವ ಫೋಟೋವನ್ನು ರಾಹುಲ್ ಪ್ರಕಟಿಸಿದ್ದಾರೆ.

ಕೆಎಲ್ ರಾಹುಲ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುತ್ತಿದ್ದಾರೆ. ಇಂದು 32 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳು ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ