ಕೆಎಲ್ ರಾಹುಲ್, ಅಕ್ಸರ್ ಪಟೇಲ್ ವಿಂಡೀಸ್ ಟಿ20 ಸರಣಿಯಿಂದ ಔಟ್
ದ್ವಿತೀಯ ಏಕದಿನ ಪಂದ್ಯದ ವೇಳೆ ಕೆಎಲ್ ರಾಹುಲ್ ಗೆ ಸ್ನಾಯು ಸೆಳೆತವಾಗಿದ್ದು, ಈ ಕಾರಣಕ್ಕೆ ಅವರು ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು, ಅಕ್ಸರ್ ಪಟೇಲ್ ಕೊರೋನಾದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ.
ಹೀಗಾಗಿ ಇಬ್ಬರೂ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿಪರ್ಯಾಸವೆಂದರೆ ಅಕ್ಸರ್ ಪಟೇಲ್ ಗಾಯದಿಂದಾಗಿ ಕಳೆದ ಕೆಲವು ದಿನಗಳಿಂದ ಮೈದಾನಕ್ಕಿಳಿದಿಲ್ಲ. ಕೆಎಲ್ ರಾಹುಲ್ ಕೂಡಾ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡವರು. ಇದೀಗ ಮತ್ತೆ ಗಾಯದಿಂದಾಗಿ ಸರಣಿಯಿಂದ ಹೊರಗುಳಿಯಬೇಕಾಗಿದೆ. ಬುಧವಾರದಿಂದ ಟಿ20 ಸರಣಿ ಆರಂಭವಾಗಲಿದೆ.