ಮತ್ತೆ ಶೂನ್ಯ ಸುತ್ತಿದರೂ ದಿಗ್ಗಜ ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಮಂಗಳವಾರ, 18 ಡಿಸೆಂಬರ್ 2018 (09:31 IST)
ಪರ್ತ್: ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ವೈಫಲ್ಯಗಳ ಸರಮಾಲೆ ಮುಗಿದಂತೆ ಕಾಣುತ್ತಿಲ್ಲ. ಸತತವಾಗಿ ಅವಕಾಶ ಪಡೆದೂ ಬಳಸಿಕೊಳ್ಳದೇ ತಂಡಕ್ಕೆ ಸಂಕಷ್ಟ ತಂದಿಡುವ ರಾಹುಲ್ ಇದೀಗ ಸುನಿಲ್ ಗವಾಸ್ಕರ್ ಅವರ ಬೇಡದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.


ಸತತವಾಗಿ ವೈಫಲವ್ಯವಾಗಿ ಟ್ವಿಟರ್ ನಲ್ಲಿ ವ್ಯಾಪಕ ಟ್ರೋಲ್ ಗೆ ಗುರಿಯಾಗುತ್ತಿರುವ ರಾಹುಲ್ ಗೆ ಇನ್ನು ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕುವುದು ಅನುಮಾನವೇ. ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲೂ ರಾಹುಲ್ ಮೊದಲ ಓವರ್ ನಲ್ಲೇ ನಾಲ್ಕು ಎಸೆತ ಎದುರಿಸಿ ಶೂನ್ಯಕ್ಕೆ ಬೌಲ್ಡ್ ಔಟ್ ನಿರ್ಗಮಿಸಿದ್ದಾರೆ. ಮೊದಲ ಇನಿಂಗ್ಸ್ ನಲ್ಲೂ ರಾಹುಲ್ ಬೌಲ್ಡ್ ಆಗಿದ್ದರು.

ಈ ಮೂಲಕ ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ಬಾರಿ ಎರಡೂ ಇನಿಂಗ್ಸ್ ಗಳಲ್ಲಿ ಬೌಲ್ಡ್ ಔಟ್ ಆದ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. 125 ಟೆಸ್ಟ್ ಪಂದ್ಯಗಳನ್ನಾಡಿದ್ದ ಗವಾಸ್ಕರ್ 11 ಬಾರಿ ಬೌಲ್ಡ್ ಔಟ್ ಆಗಿ ದಾಖಲೆ ಹೊಂದಿದ್ದರು. ಇದೀಗ ರಾಹುಲ್ 33 ಟೆಸ್ಟ್ ಪಂದ್ಯಗಳಾಡಿ 11 ಬಾರಿ ಎರಡೂ ಇನಿಂಗ್ಸ್ ಗಳಲ್ಲಿ ಶೂನ್ಯ ಸಂಪಾದಿಸಿದ ಅಪಕೀರ್ತಿಗೆ ಒಳಗಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ