ಟೀಂ ಇಂಡಿಯಾ ಬೌಲರ್ ಗಳನ್ನು ಯಾಮಾರಿಸಿದ ಆಸ್ಟ್ರೇಲಿಯಾ
ಇಂದು ಭೋಜನ ವಿರಾಮದ ವರೆಗೂ ಆಸ್ಟ್ರೇಲಿಯಾ ವಿಕೆಟ್ ಕಳೆದುಕೊಳ್ಳದೇ ಭಾರತೀಯ ಬೌಲರ್ ಗಳನ್ನು ಮತ್ತಷ್ಟು ಸುಸ್ತು ಮಾಡಿದ್ದಾರೆ. ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ 67 ರನ್ ಗಳಿಸಿದರೆ ಟಿಮ್ ಪೇಯ್ನ್ 37 ರನ್ ಗಳಿಸಿ ಆಡುತ್ತಿದ್ದಾರೆ. ಅತಿಥೇಯ ಪಡೆ ಕೊಂಚ ನಿಧಾನಗತಿಯಲ್ಲಿ ಆಡಿದರೂ ಇನಿಂಗ್ಸ್ ಮುನ್ನಡೆಯೂ ಸೇರಿರುವುದರಿಂದ ಈ ಪಂದ್ಯದಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ.