ಟಿ20 ವಿಶ್ವಕಪ್ ನಿಂದ ಔಟ್ ಆಗಿರುವ ಕೆಎಲ್ ರಾಹುಲ್ ಪತ್ನಿ ಜೊತೆ ರಜಾ ಮಜಾ

Krishnaveni K

ಬುಧವಾರ, 29 ಮೇ 2024 (13:13 IST)
ಮುಂಬೈ: ಟಿ20 ವಿಶ್ವಕಪ್ ತಂಡದಿಂದ ಸ್ಥಾನ ಕಳೆದುಕೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಪತ್ನಿ ಅಥಿಯಾ ಜೊತೆ ಟೂರ್ ಹೊರಟಿದ್ದಾರೆ.

ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ವೇಳೆಯೂ ಅವರು ನಾನಾ ಕಾರಣಗಳಿಂದ ಸುದ್ದಿಯಾಗಿದ್ದರು.

ಲಕ್ನೋ ಸೂಪರ್ ಜೈಂಟ್ಸ್ ನಾಯಕನನ್ನು ಮಾಲಿಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಕೋಚ್ ಜಸ್ಟಿನ್ ಲ್ಯಾಂಗರ್ ಟೀಂ ಇಂಡಿಯಾ ಕೋಚ್ ಹುದ್ದೆಯಲ್ಲಿ ರಾಜಕೀಯ ಒತ್ತಡಗಳಿರುತ್ತವೆ ಎಂದು ಕೆಎಲ್ ರಾಹುಲ್ ಹೇಳಿರುವುದಾಗಿ ಹೇಳಿಕೆ ನೀಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಇದೆಲ್ಲಾ ವಿವಾದಗಳ ನಡುವೆ ಕೆಎಲ್ ರಾಹುಲ್ ಇದೀಗ ಪತ್ನಿ ಅಥಿಯಾ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ನಿಂದ ಬಿಡುವು ಸಿಕ್ಕ ಹಿನ್ನಲೆಯಲ್ಲಿ ರಾಹುಲ್ ಪತ್ನಿ ಜೊತೆ ಪ್ರವಾಸ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ