ಟಿ20 ವಿಶ್ವಕಪ್ ನ ಟಾಪ್ ಸ್ಕೋರರ್ ಆಗ್ತಾರಾ ಕೆಎಲ್ ರಾಹುಲ್?

ಶನಿವಾರ, 23 ಅಕ್ಟೋಬರ್ 2021 (09:16 IST)
ದುಬೈ: ಟಿ20 ವಿಶ್ವಕಪ್ ಆಡಲಿರುವ ಟೀಂ ಇಂಡಿಯಾಗೆ ಈಗ ಕೆಎಲ್ ರಾಹುಲ್ ಮೇಲೆ ಅಪಾರ ಭರವಸೆ. ಐಪಿಎಲ್ ನಲ್ಲಿ ರನ್ ಹೊಳೆ ಸುರಿಸಿದ್ದ ರಾಹುಲ್ ಈಗ ಟಿ20 ವಿಶ್ವಕಪ್ ನಲ್ಲೂ ಅದೇ ಫಾರ್ಮ್ ಮುಂದುವರಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.


ಟಿ20 ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದರೆ ರಾಹುಲ್ ರನ್ ಗಳಿಸುವುದು ಗ್ಯಾರಂಟಿ. ಆರಂಭಿಕರಾಗಿ ಅವರ ದಾಖಲೆ ನಾಯಕ ಕೊಹ್ಲಿಗಿಂತಲೂ ಅತ್ಯುತ್ತಮವಾಗಿದೆ.

ಅಭ್ಯಾಸ ಪಂದ್ಯಗಳಲ್ಲೂ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ ಕೂಟದಲ್ಲಿ ಟಾಪ್ ಸ್ಕೋರರ್ ಪಟ್ಟಿಯಲ್ಲಿ ರಾಹುಲ್ ಮುಂಚೂಣಿಯಲ್ಲಿರಬಹುದು ಎಂಬುದು ಎಲ್ಲರ ಲೆಕ್ಕಾಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ