ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ನೇಮಕಕ್ಕೆ ಕೊಹ್ಲಿ, ರೋಹಿತ್ ಅಭಿಪ್ರಾಯ
ಗುರುವಾರ, 21 ಅಕ್ಟೋಬರ್ 2021 (11:12 IST)
ಮುಂಬೈ: ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ ಕುರಿತು ಭಾರೀ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಗಳನ್ನೂ ಪರಿಗಣಿಸಲಾಗುತ್ತದೆ.
ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದರೂ, ಏಕದಿನ ಮತ್ತು ಟೆಸ್ಟ್ ಗೆ ನಾಯಕರಾಗಿ ಮುಂದುವರಿಯಲಿದ್ದಾರೆ. ಅತ್ತ, ರೋಹಿತ್ ಟಿ20 ತಂಡಕ್ಕೆ ಮುಂದಿನ ನಾಯಕ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.
ಹೀಗಾಗಿ ತಂಡದ ಕೋಚ್ ನೇಮಕ ಮಾಡುವಾಗ ಇಬ್ಬರ ಅಭಿಪ್ರಾಯವನ್ನೂ ಬಿಸಿಸಿಐ ಗಣನೆಗೆ ತೆಗೆದುಕೊಳ್ಳಲಿದೆ. ಈ ಮೊದಲು ರವಿಶಾಸ್ತ್ರಿ ನೇಮಕ ಮಾಡುವಾಗಲೂ ಬಿಸಿಸಿಐ ನಾಯಕ ಕೊಹ್ಲಿ ಅಭಿಪ್ರಾಯಕ್ಕೆ ಬೆಲೆ ಕೊಟ್ಟಿತ್ತು.