ಗಂಭೀರ್ ಕೋಚ್ ಆದ ಮೇಲೆ ಕೆಎಲ್ ರಾಹುಲ್ ಆಡಿಸಿದಂತೆ ಆಡುವ ಬೊಂಬೆ ಆಗಿಬಿಟ್ಟರಾ

Krishnaveni K

ಮಂಗಳವಾರ, 11 ಫೆಬ್ರವರಿ 2025 (08:47 IST)
ಮುಂಬೈ: ಟೀಂ ಇಂಡಿಯಾದ ಪ್ರತಿಭಾವಂತ ಬ್ಯಾಟಿಗ ಕೆಎಲ್ ರಾಹುಲ್ ಪರಿಸ್ಥಿತಿ ತಂಡದಲ್ಲಿ ಕೋಚ್ ಆಗಿ ಗಂಭೀರ್ ಬಂದ ಮೇಲೆ ಆಡಿಸಿದಂತೆ ಆಡುವ ಬೊಂಬೆಯಂತಾಗಿ ಬಿಟ್ಟಿದೆ.

ಈ ಬಗ್ಗೆ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬಹುಶಃ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ನಂತಹ ಫ್ಲೆಕ್ಸಿಬಲ್ ಆಟಗಾರ ಮತ್ತೊಬ್ಬರಿಲ್ಲ. ಅವರಷ್ಟು ಬ್ಯಾಟಿಂಗ್ ಪ್ರಯೋಗಕ್ಕೆ ಬಲಿಯಾದ ಕ್ರಿಕೆಟಿಗರಿರಲ್ಲ. ಇದೀಗ ಗಂಭೀರ್ ಬಂದ ಮೇಲಂತೂ ರಾಹುಲ್ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ತಂಡದಲ್ಲಿ ನನಗೆ ಸ್ಥಾನ ಸಿಕ್ಕರೆ ಯಾವ ಕ್ರಮಾಂಕವೆಂದು ನಾನು ಚಿಂತೆ ಮಾಡಲ್ಲ ಎಂದು ರಾಹುಲ್ ಹೇಳುತ್ತಾರೆ. ಅದಕ್ಕೆ ತಕ್ಕಂತೆ ಅವರನ್ನು ಇತ್ತೀಚೆಗಂತೂ ಪ್ರಯೋಗಪಶು ಮಾಡಲಾಗಿದೆ. ಅತ್ಯಂತ ಅನುಭವಿ ಕ್ರಿಕೆಟಿಗರಾದ ರಾಹುಲ್ ಈಗ  ಅಕ್ಷರ್ ಪಟೇಲ್ ಗಿಂತಲೂ ನಂತರದ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ರಾಹುಲ್ ಗೆ ಬ್ಯಾಟಿಂಗ್ ಗೆ ಅವಕಾಶವೇ ಕೊಡಲಾಗುತ್ತಿಲ್ಲ. ಇದರಿಂದಾಗಿ ಅವರ ಬ್ಯಾಟಿಂಗ್ ಮೇಲೂ ಪರಿಣಾಮ ಬೀರುತ್ತಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕರಾಗಿದ್ದ ರಾಹುಲ್ ವೈಟ್ ಬಾಲ್ ನಲ್ಲಿ ತಂಡದ ಮ್ಯಾನೇಜ್ ಮೆಂಟ್ ಎಲ್ಲಿ ತೋಚುತ್ತೋ ಅಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗಂಭೀರ್ ಪ್ರಯೋಗದಿಂದ ರಾಹುಲ್ ವೃತ್ತಿ ಜೀವನ ಫಿನಿಶ್ ಆಗದೇ ಇದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ