ಕೆಎಲ್ ರಾಹುಲ್ ಬ್ಯಾಟಿಂಗ್ ರೀತಿ ಪ್ರಶ್ನಿಸಿದ ನೆಟ್ಟಿಗರು
ಹಾಂಗ್ ಕಾಂಗ್ ತಂಡದ ವಿರುದ್ಧ ಪ್ರತೀ ಓವರ್ ನಲ್ಲಿ 10 ರಷ್ಟು ರನ್ ಪೇರಿಸಬೇಕಿತ್ತು. ಆದರೆ ಭಾರತ ಆರಂಭದಲ್ಲಿ ನಿಧಾನವಾಗಿರುವುದಕ್ಕೆ ಕಾರಣ ಕೆಎಲ್ ರಾಹುಲ್. ಅವರು ಐಪಿಎಲ್ ನಲ್ಲಿ ಮಾತ್ರ ಬ್ಯಾಟ್ ಬೀಸುತ್ತಾರೆ.
ರಾಷ್ಟ್ರೀಯ ತಂಡಕ್ಕೆ ಬಂದಾಗ ಅವರು ಅಬ್ಬರದ ಬ್ಯಾಟಿಂಗ್ ಮಾಡುವುದಿಲ್ಲ. ಅವರನ್ನು ಮುಂದಿನ ಪಂದ್ಯಕ್ಕೆ ಡ್ರಾಪ್ ಮಾಡಿ ರಿಷಬ್ ಪಂತ್ ಗೆ ಅವಕಾಶ ನೀಡುವುದು ಉತ್ತಮ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ನಿನ್ನೆಯ ಪಂದ್ಯದಲ್ಲಿ ರಾಹುಲ್ 36 ರನ್ ಗಳಿಸಲು 39 ಎಸೆತ ತೆಗೆದುಕೊಂಡಿದ್ದರು.