IND vs BAN test: ಕೆಎಲ್ ರಾಹುಲ್ ಗೆ ಮತ್ತೊಂದು ಚಾನ್ಸ್, ಸರ್ಫರಾಜ್ ಖಾನ್ ಗೆ ಬೆಂಚೇ ಗತಿ

Krishnaveni K

ಶುಕ್ರವಾರ, 27 ಸೆಪ್ಟಂಬರ್ 2024 (08:47 IST)
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಕಳೆದ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸರಣಿ ಕೈವಶ ಮಾಡಿಕೊಳ್ಳುವುದರ ಜೊತೆಗೆ ಭಾರತ ಡಬ್ಲ್ಯುಟಿಸಿ ಶ್ರೇಯಾಂಕದಲ್ಲೂ ನಂ.1 ಸ್ಥಾನ ಉಳಿಸಿಕೊಳ್ಳಲಿದೆ.

ಆದರೆ ಕಾನ್ಪುರ ಪಿಚ್ ಸಾಮಾನ್ಯವಾಗಿ ವೇಗಿಗಳಿಗೆ ನೆರವು ನೀಡುತ್ತದೆ. ಹೀಗಾಗಿ ಇಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಕ್ಲಿಕ್ ಆಗಬಹುದು ಎಂಬ ನಿರೀಕ್ಷೆಯಿದೆ. ಹಾಗಿದ್ದರೂ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಸ್ಪಿನ್ ಜೋಡಿ ಭಾರತಕ್ಕೆ ಟೆಸ್ಟ್ ಪಂದ್ಯಗಳಲ್ಲಿ ಆಪತ್ ಬಾಂಧವರು.

ಕೇವಲ ಬೌಲಿಂಗ್ ನಲ್ಲಿ ಮಾತ್ರವಲ್ಲ, ಸಂಕಷ್ಟದ ಸಮಯದಲ್ಲಿ ಬ್ಯಾಟಿಂಗ್ ಕೂಡಾ ಮಾಡಿ ಭಾರತವನ್ನು ಈ ಇಬ್ಬರೂ ಕಾಪಾಡಬಲ್ಲರು. ಕಳೆದ ಪಂದ್ಯದಲ್ಲಿ ಭಾರತದ ಬಿಗ್ ಥ್ರೀ ಬ್ಯಾಟಿಗರಾದ ರೋಹಿತ್, ಕೊಹ್ಲಿ, ಕೆಎಲ್ ರಾಹುಲ್ ವಿಫಲರಾಗಿದ್ದರು. ಹಿಗಾಗಿ ಈ ಮೂವರೂ ಫಾರ್ಮ್ ಗೆ ಬರುವ ನಿರೀಕ್ಷೆಯಿದೆ. ಅದರಲ್ಲೂ ಕೆಎಲ್ ರಾಹುಲ್ ಗೆ ಮತ್ತೊಂದು ಚಾನ್ಸ್ ನೀಡಲು ಟೀಂ ಮ್ಯಾನೇಜ್ ಮೆಂಟ್ ಸಿದ್ಧವಾಗಿದ್ದು, ಸರ್ಫರಾಜ್ ಖಾನ್ ಮತ್ತೆ ಬೆಂಚ್ ಕಾಯಿಸಬೇಕಾದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ