ಫಾರ್ಮ್ ನಲ್ಲಿಲ್ಲದ ರೋಹಿತ್ ಶರ್ಮಾ ಸ್ಥಾನಕ್ಕೆ ಕೆಎಲ್ ರಾಹುಲ್ ಗೆ ಸಿಗುತ್ತಾ ಛಾನ್ಸ್?
ರೋಹಿತ್ ಶರ್ಮಾ ಒಂದು ಪಂದ್ಯದಲ್ಲಿ ಶತಕ ಬಿಟ್ಟರೆ ಇನ್ಯಾವ ಪಂದ್ಯದಲ್ಲೂ ಚೆನ್ನಾಗಿ ಆಡಿಲ್ಲ. ಹೀಗಾಗಿ ನಿರ್ಣಾಯಕ ಪಂದ್ಯಕ್ಕಾದರೂ ಕನ್ನಡಿಗ ಕೆಎಲ್ ರಾಹುಲ್ ಗೆ ಕೊಹ್ಲಿ ಅವಕಾಶ ನೀಡುತ್ತಾರಾ? ಅಥವಾ ಕೊನೆ ಪಂದ್ಯವೆಂದು ತಂಡದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ವಾ? ಕಾದು ನೋಡಬೇಕು.
ಬೌಲಿಂಗ್ ನಲ್ಲೂ ಕಳೆದ ಪಂದ್ಯದಲ್ಲಿ ಬದಲಾವಣೆ ಮಾಡಿ ಕೈ ಸುಟ್ಟುಕೊಂಡಿದ್ದ ಕೊಹ್ಲಿ ಈ ಪಂದ್ಯಕ್ಕೆ ಕುಲದೀಪ್ ಯಾದವ್ ಮತ್ತು ಬುಮ್ರಾರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಅಘೋಷಿತ ಫೈನಲ್ ಪಂದ್ಯ ಆರಂಭವಾಗುವುದು ರಾತ್ರಿ 9.30 ರಿಂದ.