ಮೊದಲ ಟೆಸ್ಟ್‌ನ ಮೊದಲ ದಿನದಾಟದ ಅಂಕಿಅಂಶಗಳ ಮುಖ್ಯಾಂಶಗಳು:
ವಿರಾಟ್ ಕೊಹ್ಲಿ ಸತತ ಐದು ಟಾಸ್‌ಗಳಲ್ಲಿ ಗೆದ್ದಿದ್ದಾರೆ. ಅಜರುದ್ದೀನ್, ನಾರಿ ಕಂಟ್ರಾಕ್ಟರ್ ಮತ್ತು ಧೋನಿ ಸತತ 6 ಟಾಸ್ ಗೆಲುವಿನೊಂದಿಗೆ ದಾಖಲೆ ಹೊಂದಿದ್ದಾರೆ.
ವೆಸ್ಟ್‌ಇಂಡೀಸ್‌ನಲ್ಲಿ ಮೊದಲ ವಿಕೆಟ್‌ಗೆ 50 ಪ್ಲಸ್ ಜತೆಯಾಟವು 9 ಇನ್ನಿಂಗ್ಸ್‌ಗಳೀಚೆಗೆ ಬಂದಿಲ್ಲ. ಈ ಅವಧಿಯಲ್ಲಿ ಅತ್ಯಧಿಕ 26 ರನ್. ಇದಕ್ಕೆ ಮುಂಚೆ ನಾಲ್ಕು ಜತೆಯಾಟಗಳು 72, 159, 61 ಮತ್ತು 109 ರನ್‌ಗಳಾಗಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಮೈಲಿಗಲ್ಲು ಸ್ಥಾಪಿಸಿದ 19 ನೇ ಭಾರತೀಯ ಆಟಗಾರ ವಿರಾಟ್ ಕೊಹ್ಲಿ. ಶಿಖರ್ ಧವನ್ ಅವರ 84 ರನ್ ವೆಸ್ಟ್ ಇಂಡೀಸ್‌ನಲ್ಲಿ ಭಾರತದ ಎಡಗೈ ಆಟಗಾರ ಸ್ಕೋರ್ ಮಾಡಿದ ಎರಡನೇ ಅತ್ಯಧಿಕ ರನ್. ಧವನ್ ಅವರಿಗಿಂತ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ಆಟಗಾರರು ಹೆಚ್ಚು ರನ್ ಗಳಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳು ಪಾಲಿ ಉಮ್ರೀಗರ್(130), ಬ್ರಿಜೇಶ್ ಪಟೇಲ್(115 ಅಜೇಯ), ಸಂಜಯ್ ಮಂಜ್ರೇಕರ್(108) ಮತ್ತು ಅಜಯ್ ಜಡೇಜಾ(96).