ಕೊಹ್ಲಿ, ಡಿ ವಿಲಿಯರ್ಸ್ ಶತಕ: ಗುಜರಾತ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್

ಶನಿವಾರ, 14 ಮೇ 2016 (19:23 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಲಯನ್ಸ್ ವಿರುದ್ಧ  ಗೆಲುವು ಗಳಿಸುವ ಮೂಲಕ ಪ್ಲೇಆಫ್ ಆಸೆ ಜೀವಂತವಾಗಿರಿಸಿದೆ.  ರಾಯಲ್ ಚಾಲೆಂಜರ್ಸ್ ಮೊದಲಿಗೆ ಬ್ಯಾಟಿಂಗ್ ಆರಂಭಿಸಿ 248 ರನ್ ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ ಮತ್ತು ಡಿ ವಿಲಿಯರ್ಸ್ ಅವರಿಬ್ಬರೂ ಶತಕ ಸಿಡಿಸಿದರು.

 ವಿರಾಟ್, ಡಿವಿಲಿಯರ್ಸ್ ಒಟ್ಟು 229 ರನ್ ಜತೆಯಾಟವಾಡಿ ಬೃಹತ್ ಸ್ಕೋರಿಗೆ ಬುನಾದಿ ಹಾಕಿದರು. ಆದರೆ ನಂತರ ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡವು ರಭಸವಾಗಿ ರನ್ ಗಳಿಕೆಗೆ ಯತ್ನಿಸಿ ಪೆವಿಲಿಯನ್ ಪೆರೇಡ್ ಮಾಡಿದರು.  ಸ್ಮಿತ್, ಮೆಕಲಮ್  ಆರಂಭದಲ್ಲೇ ವಿಕೆಟ್ ಒಪ್ಪಿಸಿದರು.

 ಗುಜರಾತ್ ಲಯನ್ಸ್  18. 4 ಓವರುಗಳಲ್ಲಿ 104 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಪ್ಪಿತು. ಈ ಮೊದಲು ಕಳಪೆ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೌಲರುಗಳು ಇಂದು ಚುರುಕಾಗಿದ್ದಂತೆ ಕಂಡುಬಂದರು. ಯಜುವೇಂದ್ರ ಚಾಹಲ್  3 ವಿಕೆಟ್ ಮತ್ತು ಕ್ರಿಸ್ ಜೋರ್ಡಾನ್ 4 ವಿಕೆಟ್‌ಗಳನ್ನು ಕಬಳಿಸಿದರು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ