ರಿಷಬ್ ಪಂತ್ ಗೆ ಮೆಂಟರ್ ಆದ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್
ಅಷ್ಟೇ ಅಲ್ಲ, ಕೊಹ್ಲಿ ಈಗ ಫಾರ್ಮ್ ನಲ್ಲಿಲ್ಲದ ಕಿರಿಯರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದ ಕೆಎಲ್ ರಾಹುಲ್ ಗೆ ಕೊಹ್ಲಿ ನೆಟ್ಸ್ ನಲ್ಲಿ ಸಲಹೆ ನೀಡಿದ್ದರು. ಅದಾದ ಬಳಿಕ ಕೆಎಲ್ ಬ್ಯಾಟಿಂಗ್ ನಲ್ಲಿ ಕ್ಲಿಕ್ ಆಗಿದ್ದರು.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದರೂ ರಿಷಬ್ ಪಂತ್ ರನ್ ಗಳಿಸಲು ವಿಫಲರಾಗಿದ್ದರು. ಹೀಗಾಗಿ ಈ ಪಂದ್ಯದ ಬಳಿಕ ನೆಟ್ಸ್ ನಲ್ಲಿ ಕೊಹ್ಲಿ ಹಾಗೂ ರಾಹುಲ್ ಇಬ್ಬರೂ ರಿಷಬ್ ಗೆ ಬ್ಯಾಟಿಂಗ್ ಸಲಹೆ ನೀಡಿದ್ದಾರೆ. ಜೊತೆಯಾಗಿ ನಿಂತು ರಿಷಬ್ ತಪ್ಪುಗಳನ್ನು ತಿದ್ದಿ ಹೇಳಿದ್ದಾರೆ. ತಿದ್ದಿಕೊಂಡು ತಮ್ಮ ಖ್ಯಾತಿಗೆ ತಕ್ಕ ಆಟವಾಡಬೇಕಿರುವುದು ಈಗ ರಿಷಬ್ ಸರದಿ.