ಟಿ20 ವಿಶ್ವಕಪ್: ಟೀಂ ಇಂಡಿಯಾಗೆ ಇಂದು ಕೊನೆಯ ಲೀಗ್ ಪಂದ್ಯ

ಭಾನುವಾರ, 6 ನವೆಂಬರ್ 2022 (08:40 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇಂದು ಕೊನೆಯ ಲೀಗ್ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ.

ಈ ಟಿ20 ವಿಶ್ವಕಪ್ ನಲ್ಲಿ ಈಗಾಗಲೇ ಪಾಕಿಸ್ತಾನಕ್ಕೆ ಸೋಲುಣಿಸಿ ಜಿಂಬಾಬ್ವೆ ತಾನೂ ಎದುರಾಳಿಗೆ ಪೈಪೋಟಿ ನೀಡಬಲ್ಲ ತಂಡ ಎಂದು ಸಾಬೀತುಪಡಿಸಿತ್ತು. ಭಾರತ ನಾಲ್ಕು ಪಂದ್ಯಗಳ ಪೈಕಿ ಮೂರನ್ನು ಗೆದ್ದು ಬಿ ಗುಂಪಿನ ಅಗ್ರ ಸ್ಥಾನಿಯಾಗಿದೆ.

ಹಾಗಿದ್ದರೂ ಇಂದಿನ ಪಂದ್ಯ ಗೆದ್ದರೆ ಮಾತ್ರ ಸೆಮಿಫೈನಲ್ ಗೆ ಪ್ರವೇಶ ಪಡೆಯಲಿದೆ. ಈಗಾಗಲೇ ಕಳೆದ ಪಂದ್ಯದಲ್ಲಿ ದ.ಆಫ್ರಿಕಾ ಸೋತಿರುವುದರಿಂದ ಅಂಕಗಳ ಲೆಕ್ಕಾಚಾರದಲ್ಲಿ ಪಾಕ್ ಕೂಡಾ ಪೈಪೋಟಿಯಲ್ಲಿದೆ. ಹೀಗಾಗಿ ಸೆಮಿಫೈನಲ್ ಸ್ಥಾನಕ್ಕೆ ಯಾವುದೇ ತೊಂದರೆಯಾಗದೇ ಇರಲು ಭಾರತ ಇಂದು ಗೆಲ್ಲಲೇಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ