ಲಂಡನ್ ದಾಳಿ: ಟೀಂ ಇಂಡಿಯಾ ಆಟಗಾರರ ಹೋಟೆಲ್ ಗೆ ಹೆಚ್ಚಿನ ಭದ್ರತೆ
ಭಾನುವಾರ, 4 ಜೂನ್ 2017 (11:32 IST)
ಲಂಡನ್: ಲಂಡನ್ ನ ವಿವಿದೆಡೆ ಉಗ್ರರ ದಾಳಿಯಿಂದಾಗಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಪಾಲ್ಗೊಳ್ಳಲು ಬರ್ಮಿಂಗ್ ಹ್ಯಾಮ್ ನ ಹೋಟೆಲ್ ನಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ನ್ನು ಕೆಲ ಕಾಲ ಮುಚ್ಚಿ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು, ಪಂದ್ಯ ನಡೆಯುವಲ್ಲಿಯೂ ಭದ್ರತೆ ಹೆಚ್ಚಿಸಿದ್ದಾರೆ. ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿರುವ ಹೋಟೆಲ್ ಉಗ್ರರ ದಾಳಿ ನಡೆದ ಸ್ಥಳದಿಂದ 200 ಕಿ. ಮೀ. ದೂರದಲ್ಲಿದೆ.
ಹೀಗಾಗಿ ಪೊಲೀಸರು ಸಕಲ ಭದ್ರತೆ ನೀಡುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಇಂದು ನಡೆಯಲಿದ್ದು, ಆ ಪಂದ್ಯಕ್ಕೆ ಉಗ್ರರು ಬೆದರಿಕೆ ಹಾಕಿಲ್ಲ. ಹಾಗಾಗಿ ಬಿಗಿ ಭದ್ರತೆಯಲ್ಲಿ ಪಂದ್ಯ ಯಥಾವತ್ತು ನಡೆಯಲಿದೆ.