ಲಾರ್ಡ್ಸ್ ಟೆಸ್ಟ್: ಟೀ ಬ್ರೇಕ್ ವೇಳೆ ಪಾಕ್ 4 ವಿಕೆಟ್‌ಗೆ 158 ಸ್ಕೋರ್

ಗುರುವಾರ, 14 ಜುಲೈ 2016 (20:21 IST)
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ  ಪಾಕಿಸ್ತಾನ ಟೀ ಬ್ರೇಕ್ ವೇಳೆಗೆ 4 ವಿಕೆಟ್ ಕಳೆದುಕೊಂಡು 158 ರನ್ ಸಾಧಾರಣ ಮೊತ್ತವನ್ನು ಸ್ಕೋರ್ ಮಾಡಿದೆ. ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕ್ ಪರ ಮಸೂದ್ ಓಕ್ಸ್ ಬೌಲಿಂಗ್‌ನಲ್ಲಿ ಬೈರ್‌ಸ್ಟೋಗೆ ಕ್ಯಾಚಿತ್ತು ಔಟಾದರು.

 ಹಫೀಜ್ ಕೂಡ ವೋಕ್ಸ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟಾದರು. ಹಫೀಜ್ 59 ಎಸೆತಗಳಲ್ಲಿ 40 ರನ್ ಸ್ಕೋರ್ ಮಾಡಿ 8 ಬೌಂಡರಿಗಳನ್ನು ಗಳಿಸಿದ್ದರು. ಅಜರ್ ಅಲಿ ಜೆ ಬಾಲ್‌ಗೆ ಎಲ್ಬಿಡಬ್ಲ್ಯುಗೆ ಬಲಿಯಾದರು. ಯೂನಿಸ್ ಖಾನ್  ಬ್ರಾಡ್ ಬೌಲಿಂಗ್‌ನಲ್ಲಿ ಅಲಿಗೆ ಕ್ಯಾಚಿತ್ತರು.
ಬ್ಯಾಟಿಂಗ್ ವಿಭಾಗದಲ್ಲಿ ಅಷ್ಟೇನೂ ಬಲಿಷ್ಠವಾಗಿರದ ಪಾಕ್ ತಂಡ 52 ಓವರುಗಳಲ್ಲಿ 158 ಮಾತ್ರ ಸ್ಕೋರ್ ಮಾಡಿದ್ದು, ಮಿಶಬ್ ಉಲ್ ಹಕ್ ಬ್ಯಾಟಿಂಗ್ ಮೇಲೆ ಎಲ್ಲವೂ ಅವಲಂಬಿಸಿದೆ. ಮಿಷಬ್ ಉಲ್ ಹಕ್  48 ಸ್ಕೋರ್ ಮಾಡಿ ಅಜೇಯರಾಗಿ ಉಳಿದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ