LSG vs PBKS: ದುಬಾರಿ ಆಟಗಾರರ ಸೆಣಸಾಟದಲ್ಲಿ ಯಾರಿಗೆ ಸಿಗುತ್ತೆ ಜಯ

Sampriya

ಮಂಗಳವಾರ, 1 ಏಪ್ರಿಲ್ 2025 (19:32 IST)
Photo Courtesy X
ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮದ್ಯೆ ಪಂದ್ಯಾಟ ಡೆಯಲಿದೆ.  ಟಾಸ್‌ ಗೆದ್ದ ಪಂಜಾಬ್‌ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದು, ಲಕ್ನೋದವರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಇಂದಿನ ಪಂದ್ಯಾಟದಲ್ಲಿ ಐಪಿಎಲ್‌ ಇತಿಹಾಸದಲ್ಲೇ ಅತೀ ದುಬಾರಿ ಆಟಗಾರ ಎನಿಸಿರುವ ರಿಷಬ್ ಪಂತ್‌ ಸಾರಥ್ಯದ ಲಕ್ನೋ ತಂಡ ಮತ್ತು ಎರಡನೇ ಅತೀ ದುಬಾರಿ ಆಟಗಾರ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡಗಳು ಸೆಣೆಸುತ್ತಿವೆ. ಮೆಗಾ ಹರಾಜಿನಲ್ಲಿ ರಿಷಬ್ ಪಂತ್‌ 27ಕೋಟಿ ಮತ್ತು ಶ್ರೇಯಸ್ ಅಯ್ಯರ್ 26.75ಕೋಟಿ ಪಡೆದಿದ್ದರು.

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಸಬ್ಸ್‌: ಪ್ರವೀಣ್ ದುಬೆ, ವಿಜಯ್‌ಕುಮಾರ್ ವೈಶಾಕ್, ನೆಹಾಲ್ ವಧೇರಾ, ವಿಷ್ಣು ವಿನೋದ್, ಹರ್‌ಪ್ರೀತ್ ಬ್ರಾರ್

ಲಕ್ನೋ ಸೂಪರ್ ಜೈಂಟ್ಸ್ ಇಂಪ್ಯಾಕ್ಟ್ ಸಬ್ಸ್: ಪ್ರಿನ್ಸ್ ಯಾದವ್, ಮಣಿಮಾರನ್ ಸಿದ್ಧಾರ್ಥ್, ಶಹಬಾಜ್ ಅಹ್ಮದ್, ಹಿಮ್ಮತ್ ಸಿಂಗ್, ಆಕಾಶ್ ಮಹಾರಾಜ್ ಸಿಂಗ್.

ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2025 ರ ತಮ್ಮ ತವರು ಲೆಗ್ ಅನ್ನು ಪಿಬಿಕೆಎಸ್ ವಿರುದ್ಧ ಆರಂಭಿಸುತ್ತಿದೆ. ಎಲ್ಎಸ್‌ಜಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲು ಮತ್ತು 2024 ರ ಫೈನಲಿಸ್ಟ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಅಭಿಯಾನಕ್ಕೆ ಮಿಶ್ರ ಆರಂಭವನ್ನು ಪಡೆದಿದ್ದರೆ, ಪಿಬಿಕೆಎಸ್ ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವಿನೊಂದಿಗೆ ಉತ್ತಮ ಆರಂಭವನ್ನು ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ