MI vs KKR: ತವರಿನಲ್ಲಿ ಗೆಲುವಿನ ಖಾತೆ ತೆರೆದ ಮುಂಬೈ ಇಂಡಿಯನ್ಸ್‌

Sampriya

ಸೋಮವಾರ, 31 ಮಾರ್ಚ್ 2025 (22:54 IST)
Photo Courtesy X
ಮುಂಬೈ: ಐಪಿಎಲ್‌ 2025ರ ಇಂದಿನ ಪಂದ್ಯಾಟದಲ್ಲಿ ಕೆಕೆಆರ್ ವಿರುದ್ಧ  ಮುಂಬೈ ಇಂಡಿಯನ್ಸ್‌ 8 ವಿಕೆಟ್‌ಗಳೊಂದಿಗೆ ಅಮೋಘ ಜಯಗಳಿಸುವ ಮೂಲಕ ತವರಿನಲ್ಲಿ ತನ್ನ ಗೆಲುವಿನ ಖಾತೆಯನ್ನುತೆರೆದಿದೆ. ಚೊಚ್ಚಲ ಪಂದ್ಯದಲ್ಲಿ ಮುಂಬೈ ಆಟಗಾರ ಅಶ್ವಿನ್ ಕುಮಾರ್‌ ತನ್ನ ಬೊಂಬಾಟ್ ಬೌಲಿಂಗ್‌ನಿಂದ  ಕೆಕೆಆರ್‌ನ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ, ಗಮನಸೆಳೆದರು.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ದುಕೊಂಡು, ಕೆಕೆಆರ್‌ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಆದರೆ ಮುಂಬೈ ವೇಗಿಗಳ ಬೌಲಿಂಗ್‌ಗೆ ಇನ್ನೂ 22 ಎಸೆತಗಳು ಬಾಕಿಯಿರುವಾಗಲೇ ಕೆಕೆಆರ್‌ ಎಲ್ಲ ವಿಕೆಟ್‌ ಕಳೆದುಕೊಂಡು, 116ರನ್ ಗಳಿಸಿತು. ಇನ್ನೂ ಚೊಚ್ಚಲ ಪಂದ್ಯದಲ್ಲೇ ಮುಂಬೈ ಆಟಗಾರ ಆಶ್ವಿನಿ ಕುಮಾರ್‌ 4 ವಿಕೆಟ್ ಕಬಳಿಸಿ ಐಪಿಎಲ್‌ 2025ರಲ್ಲಿ ಹೊಸ ಛಾಪು ಮೂಡಿಸಿದರು.

ಇನ್ನೂ ಕೆಕೆಆರ್ ನೀಡಿದ ಟಾರ್ಗೇಟ್ ಮುಂಬೈ ಇಂಡಿಯನ್ಸ್‌ ಇನ್ನೂ 43 ಎಸೆತಗಳು ಬಾಕಿಯಿರುವಾಗಲೇ ಗೆಲುವಿನ ನಗೆ ಬೀರಿತು. ಈ ಮೂಲಕ ಮುಂಬೈ ಇಂಡಿಯನ್ಸ್‌ ತನ್ನ ತವರಿನಲ್ಲಿ ಗೆಲುವಿನ ನಗೆ ಬೀರಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ