ಲಕ್ಷ ಬೆಲೆಬಾಳುವ ಬೈಕ್`ಗಳಿದ್ದರೂ ಈ ಸೆಕೆಂಡ್ ಹ್ಯಾಂಡ್ ಬೈಕ್ ಎಂದರೆ ಧೋನಿಗೆ ಎಲ್ಲಿಲ್ಲದ ಮೋಹ
ಶುಕ್ರವಾರ, 7 ಜುಲೈ 2017 (17:47 IST)
ಮಹೇಂದ್ರ ಸಿಂಗ್ ಧೋನಿ ದೇಶ ಕಂಡ ಮಹಾನ್ ಕ್ರಿಕೆಟಿಗ ಎನ್ನುವ ಜೊತೆಗೆ ಅವರಿಗಿರುವ ಕಾರು ಮತ್ತು ಬೈಕ್ ಮೋಹದಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಹಾರ್ಲೆ ಡೇವಿಡ್ ಸನ್, ಕಾನ್ಫೆಡರೇಟ್ ಹೆಲಿಕ್ಯಾಟ್`ನಂತಹ ದೊಡ್ಡ ದೊಡ್ಡ ಬೈಕ್`ಗಳು ಧೋನಿಯ ಬಳಿ ಇವೆ. ಆದರೂ ತಾವು ಮೊದಲು ಖರೀದಿಸಿದ ಯಮಹಾ ಆರ್ ಎಕ್ಸ್ 100 ಸೆಕೆಂಡ್ ಹ್ಯಾಂಡ್ ಬೈಕ್ ಬಗ್ಗೆ ಧೋನಿಗೆ ಎಲ್ಲಿಲ್ಲದ ಮೋಹ.
ಹೌದು, ಧೋನಿಗೆ ಈ ಬೈಕ್ ಎಮದರೆ ಒಂದು ರೀತಿ ಭಾವನಾತ್ಮಕ ಸಂಬಂಧವಿದೆ. 2003ರಲ್ಲಿ ರಣಜಿ ಆಡುತ್ತಿದ್ದಾಗ ಸ್ನೇಹಿತನೊಬ್ಬನಿಂದ 6000 ರೂ. ಕೊಟ್ಟು ಧೋನಿ ಈ ಬೈಕ್ ಖರೀದಿಸಿದ್ದಾರೆ. ಬಳಿಕ 25000 ರೂ. ಖರ್ಚು ಮಾಡಿ ಬೈಕ್ ರಿಪೇರಿ ಮಾಡಿಸಿದ್ದಾರೆ. ಈ ಬೈಕ್ ಖರೀದಿಸಿ ಒಂದೇ ವರ್ಷದಲ್ಲಿ ಧೋನಿ ಭವಿಷ್ಯವೇ ಬದಲಾಯಿತಂತೆ.
ಟೀಮ್ ಇಂಡಿಯಾಗೆ ಧೋನಿ ಎಂಟ್ರಿ: 2004ರಲ್ಲಿ ಧೋನಿ ಇಂಡಿಯಾ ಎ ಟೀಮ್`ಗೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್`ಮನ್ ಆಗಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಧೋನಿ ತಿರುಗಿ ನೋಡಿದ್ದೇ ಇಲ್ಲ. ದ್ಬುತ ಾಟದಿಂದ ಗಮನ ಸೆಳೆದ ಧೋನಿ ಟೀಮ್ ಇಂಡಿಯಾ ನಾಯಕನಾಗಿ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟರು. ಹೀಗಾಗಿಯೇ ಧೋನಿ ಇದನ್ನ ಲಕ್ಕಿ ಬೈಕ್ ಎಂದು ಈಗಳು ಇಟ್ಟುಕೊಂಡಿದ್ದಾರೆ.
ಧೋನಿ ರಾಂಚಿಗೆ ಭೇಟಿ ನೀಡಿದಾಗಲೆಲ್ಲ ಈ ಬೈಕ್ ಮೇಲೆ ಒಂದು ರೈಡ್ ಹೋಗ್ತಾರಂತೆ. ಪ್ರತೀ ಸಾರಿ ಏನಾದರೊಂದು ರಿಪೇರಿ ಮಾಡಿಸುತ್ತಾರಂತೆ. ತನ್ನ ಲಕ್ಕಿ ಬೈಕನ್ನ ಪ್ರತೀ ಸಾರಿ ಕಂಡೀಷನ್`ನಲ್ಲಿ ಇಟ್ಟುಕೊಳ್ಳುತ್ತಾರಂತೆ ಧೋನಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ