ಪಾಕಿಸ್ತಾನಕ್ಕೆ ಮಲೇಷ್ಯಾ ಕ್ರಿಕೆಟ್ ಕೊಟ್ಟಿತು ಸರ್ಟಿಫಿಕೇಟ್!
ಮಂಗಳವಾರ, 17 ಜನವರಿ 2017 (11:57 IST)
ಕರಾಚಿ: ಎಲ್ಲಾ ದೇಶದ ಕ್ರಿಕೆಟ್ ತಂಡಗಳೂ ಪಾಕಿಸ್ತಾನ ಸುರಕ್ಷಿತವಲ್ಲ ಎಂದು ಅಲ್ಲಿ ಕ್ರಿಕೆಟ್ ಆಡೋದಿಲ್ಲ ಎಂದು ಹಿಂದೇಟು ಹಾಕುತ್ತಿದ್ದರೆ, ಈಗಷ್ಟೇ ಕ್ರಿಕೆಟ್ ನಲ್ಲಿ ಅಂಬೆಗಾಲಿಡುತ್ತಿರುವ ಮಲೇಷ್ಯಾ ಕ್ರಿಕೆಟ್ ಸಂಸ್ಥೆ ಪಾಕಿಸ್ತಾನಕ್ಕೆ ಸರ್ಟಿಫಿಕೇಟ್ ಕೊಟ್ಟಿದೆ.
ಪಾಕ್ ಸುರಕ್ಷಿತ. ಅಲ್ಲಿ ಕ್ರಿಕೆಟ್ ಆಡಲು ಯಾವುದೇ ಹಿಂಜರಿಕೆ ಬೇಡ. ಇಲ್ಲಿ ಕ್ರಿಕೆಟ್ ಸರಣಿ ಆಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೊಂಡಿದೆ. ಹೀಗಂತ ಸುಮ್ಮನೇ ಹೇಳಿಲ್ಲ. ಇತ್ತೀಚೆಗೆ 10 ದಿನ ಪಾಕ್ ಗೆ ಭೇಟಿ ನೀಡಿದ ಬಳಿಕ ಮಲೇಷ್ಯಾ ಹೀಗೆ ಹೇಳಿಕೊಂಡಿದೆ.
ಇಷ್ಟೇ ಅಲ್ಲದೆ, ಮತ್ತೊಮ್ಮೆ, ಏಪ್ರಿಲ್ ತಿಂಗಳಲ್ಲಿ ಕ್ರಿಕೆಟ್ ಆಡಲು ಇಲ್ಲಿಗೆ ಬಂದಿಳಿಯಲು ಆಸಕ್ತರಾಗಿರುವುದಾಗಿ ಕ್ರಿಕೆಟ್ ಮಲೇಷ್ಯಾ ಹೇಳಿಕೊಂಡಿದೆ. ನಮ್ಮ ತಂಡಕ್ಕೆ ಯಾವುದೇ ಭದ್ರತೆ ಕೊರತೆ ಎದುರಾಗಲಿಲ್ಲ ಎಂದು ಅದು ಹೇಳಿಕೊಂಡಿದೆ.
ಮೊನ್ನೆಯಷ್ಟೇ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸುರಕ್ಷಿತ ಕಾರಣಕ್ಕೆ ಮೊನ್ನೆಯಷ್ಟೇ ತನ್ನ ಉದ್ದೇಶಿತ ಪ್ರವಾಸ ರದ್ದುಗೊಳಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟಿಗ ಸಂಘ ಕೂಡಾ ಪಾಕಿಸ್ತಾನ ಅಸುರಕ್ಷಿತ ಎಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ