ಪಾಕಿಸ್ತಾನ ವಿರುದ್ಧ ಕನ್ನಡಿಗ ಮನೀಶ್ ಪಾಂಡೆ ಆಯ್ಕೆಯಾಗದಿದ್ದರೂ ಫೀಲ್ಡಿಂಗ್ ಮಾಡಿದ್ದೇಕೆ ಗೊತ್ತಾ?

ಗುರುವಾರ, 20 ಸೆಪ್ಟಂಬರ್ 2018 (09:33 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕರ್ನಾಟಕ ಮೂಲದ ಮನೀಶ್ ಪಾಂಡೆ ಅವಕಾಶ ಪಡೆದಿರಲಿಲ್ಲ.

ಹಾಗಿದ್ದರೂ ಅವರಿಗೆ ಫೀಲ್ಡಿಂಗ್ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ.  ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ ಫೀಲ್ಡಿಂಗ್ ಸಂದರ್ಭದಲ್ಲಿ ಬಹುಪಾಲು ಪೆವಿಲಿಯನ್ ನಲ್ಲೇ ಕಳೆದರು.

ಅವರ ಸ್ಥಾನಕ್ಕೆ ಮನೀಶ್ ಪಾಂಡೆ ಫೀಲ್ಡಿಂಗ್ ಮಾಡಿದರು. ಹೀಗಾಗಿ ಪಾಕ್ ವಿರುದ್ಧ ಆಡುವ ಬಳಗದಲ್ಲಿ ಸ್ಥಾನ ಪಡೆಯದಿದ್ದರೂ ಆಡುವ ಅವಕಾಶ ಪಡೆದರು. ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ ಪಾಂಡೆ ಒಂದು ಕ್ಯಾಚ್ ಕೂಡಾ ಪಡೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ