ಕನ್ನಡಿಗ ಕ್ರಿಕೆಟಿಗ ಮನೀಶ್ ಪಾಂಡೆಯನ್ನು ಗೇಲಿ ಮಾಡಿದ ಅಭಿಮಾನಿಗಳು
ಮನೀಶ್ ಇತ್ತೀಚೆಗೆ ದೊಡ್ಡ ಮೊತ್ತದ ಇನಿಂಗ್ಸ್ ಆಡಿಲ್ಲ. ಇದೇ ಕಾರಣಕ್ಕೆ ಅವರ ಆಯ್ಕೆಯನ್ನು ಅಭಿಮಾನಿಗಳು ಪ್ರಶ್ನಿಸುತ್ತಲೇ ಇರುತ್ತಾರೆ. ಇದೀಗ ನಿನ್ನೆಯ ಪಂದ್ಯದಲ್ಲಿ ನಿಧಾನಗತಿಯಲ್ಲಿ 21 ರನ್ ಬಾರಿಸಿದ ಮನೀಶ್ ರನ್ನು ಟೆಸ್ಟ್ ಇನಿಂಗ್ಸ್ ಆಡಿದ್ದಕ್ಕೆ ಧನ್ಯವಾದಗಳು ಎಂದು ಮೂದಲಿಸಿದ್ದಾರೆ.
ಅಷ್ಟೇ ಅಲ್ಲದೆ, ಮನೀಶ್ ಆಡುತ್ತಿರಬೇಕಾದರೆ, ದಯವಿಟ್ಟು ಮನೀಶ್ ರನ್ನು ಯಾರಾದರೂ ಔಟ್ ಮಾಡಿ. ಇವನೇನಾದರೂ ಕೊನೆಯವರೆಗೆ ಔಟಾಗದೇ ಉಳಿದರೆ ಭಾರತಕ್ಕೆ 20 ರನ್ ನಷ್ಟವಾಗೋದು ಗ್ಯಾರಂಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.