ರೋಹಿತ್ ಶರ್ಮಾರನ್ನು ಹೊರಗಟ್ಟಲೆಂದೇ ಬಿಸಿಸಿಐ ಮಾಡಿರುವ ಪ್ಲ್ಯಾನ್ ಇದು: ಮನೋಜ್ ತಿವಾರಿ

Krishnaveni K

ಶುಕ್ರವಾರ, 29 ಆಗಸ್ಟ್ 2025 (16:35 IST)
ಮುಂಬೈ: ಟೀಂ ಇಂಡಿಯಾ ಏಕದಿನ ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಹೊರಗಟ್ಟಲೆಂದೇ ಬಿಸಿಸಿಐ ಈ ಪ್ಲ್ಯಾನ್ ಮಾಡಿದೆ ಎಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿಸಿಸಿಐ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಟೆಸ್ಟ್ ಗಾಗಿ ಬ್ರೋಂಕೋ ಟೆಸ್ಟ್ ಪರಿಚಯಿಸಿದೆ. ಇದು ಕಠಿಣ ಫಿಟ್ನೆಸ್ ಟೆಸ್ಟ್ ಪರೀಕ್ಷೆಯಾಗಿದ್ದು ಇದನ್ನು ಪಾಸ್ ಆದರೆ ಮಾತ್ರ ಟೀಂ ಇಂಡಿಯಾದಲ್ಲಿ ಆಡಲು ಆಟಗಾರ ಫಿಟ್ ಆಗುತ್ತಾನೆ.

ಆದರೆ ಈ ಟೆಸ್ಟ್ ನ್ನು ರೋಹಿತ್ ಶರ್ಮಾರಂತಹ ಆಟಗಾರರನ್ನು ತಂಡದಿಂದ ಹೊರಗಿಡುವ ಉದ್ದೇಶದಿಂದಲೇ ಮಾಡಲಾಗಿದೆ ಎಂದು ಮನೋಜ್ ತಿವಾರಿ ಆರೋಪಿಸಿದ್ದಾರೆ. ಇಂತಹ ಕಠಿಣ ಪರಿಕ್ಷೆಯನ್ನು ರೋಹಿತ್ ರಂತಹ ಆಟಗಾರರು ಪಾಸ್ ಮಾಡುವುದು ಕಷ್ಟ. ಅದಕ್ಕಾಗಿಯೇ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಯಾರು ಈ ಬ್ರೋಂಕೋ ಟೆಸ್ಟ್ ನ್ನು ಸಡನ್ ಆಗಿ ಪರಿಚಯಿಸಿದ್ದು? ಯಾಕಾಗಿ ಮಾಡಲಾಗಿದೆ? ಇದಕ್ಕೆಲ್ಲಾ ಉತ್ತರವೇ ಇಲ್ಲ. ಈ ಪರೀಕ್ಷೆಗಳಿಂದ ರೋಹಿತ್ ರಂತಹ ಆಟಗಾರರಿಗೆ ಏಕದಿನ ಮಾದರಿಗೆ ಅವಕಾಶ ಪಡೆಯಲು ಕಷ್ಟವಾಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ