INDWvsPAKW: ಕೈ ಕುಲುಕುವುದು ಬಿಡಿ, ಮುಖವೂ ನೋಡದ ಹರ್ಮನ್ ಪ್ರೀತ್ ಕೌರ್

Krishnaveni K

ಭಾನುವಾರ, 5 ಅಕ್ಟೋಬರ್ 2025 (14:47 IST)
Photo Credit: X
ಕೊಲಂಬೊ: ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಪುರುಷರ ತಂಡದಂತೆ ಮಹಿಳೆಯರ ತಂಡವೂ ಪರಸ್ಪರ ಕೈ ಕುಲುಕದೇ ನಿರ್ಭಾವುಕವಾಗಿ ಪಂದ್ಯವಾಡಲಿದೆ.

ಏಷ್ಯಾ ಕಪ್ ನಲ್ಲಿ ಪುರುಷರ ತಂಡ ಪಾಕಿಸ್ತಾನದ ವಿರುದ್ಧ ಆಡುವಾಗ ಕೈಕುಲುಕಲಿಲ್ಲ. ಇದೀಗ ಮಹಿಳೆಯರ ತಂಡಕ್ಕೂ ಬಿಸಿಸಿಐ ಇದೇ ಸೂಚನೆ ಕೊಟ್ಟಿದೆ. ಟಾಸ್ ವೇಳೆ ಅಥವಾ ಪಂದ್ಯದ ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಆಟಗಾರ್ತಿಯರ ಕೈ ಕುಲುಕಬೇಡಿ ಎಂದು ಸೂಚನೆ ಕೊಟ್ಟಿತ್ತು.

ಅದರಂತೆ ಇಂದು ಟಾಸ್ ವೇಳೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಪರಸ್ಪರ ಕೈಕುಲುಕುವುದು ಬಿಡಿ ಮುಖವೂ ನೋಡದೇ ಮುನ್ನಡೆದಿದ್ದಾರೆ.

ಇನ್ನು, ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ತಂಡ ಅನಾರೋಗ್ಯಕ್ಕೀಡಾಗಿರುವ ಅಮನ್ ಜೋತ್ ಸ್ಥಾನಕ್ಕೆ ರೇಣುಕಾ ಠಾಕೂರ್ ಗೆ ಅವಕಾಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ