ಹೆಲಿಕಾಪ್ಟರ್ ಅಪಘಾತ: ಬಾಂಗ್ಲಾ ಕ್ರಿಕೆಟಿಗ ಶಕೀಲ್ ಕೂದಲೆಳೆಯ ಅಂತರದಲ್ಲಿ ಪಾರು

ಶನಿವಾರ, 17 ಸೆಪ್ಟಂಬರ್ 2016 (14:56 IST)
ಬಾಂಗ್ಲಾ ದೇಶದ ಖ್ಯಾತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮತ್ತು ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರನ್ನು ಢಾಕಾದ ಕಾಕ್ಸ್ ಬಜಾರ್‌ನಲ್ಲಿ ಇಳಿಸಿ, ಮರಳಿ ಹೊರಟಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾದ ದಾರುಣ ಘಟನೆ ವರದಿಯಾಗಿದೆ.
 
ವರದಿಗಳ ಪ್ರಕಾರ, ಶಕೀಬ್ ಮತ್ತು ಅವರ ಪತ್ನಿ ಉಮ್ಮೆ ಅಹ್ಮದ್ ಅವರನ್ನು ಕಾಕ್ಸ್ ಬಜಾರ್‌ನಿಂದ 27 ಕಿ.ಮೀ ದೂರದಲ್ಲಿರುವ ರಾಯಲ್ ಟುಲಿಪ್ ಸೀ ರಿಸಾರ್ಟ್‌ಗೆ ತಲುಪಿಸಿದ್ದ ಹೆಲಿಕಾಪ್ಟರ್, ಮರಳಿ ಹೋಗುವಾಗ ಅಪಘಾತಕ್ಕೆ ಈಡಾಗಿದೆ.  
 
ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮಾಧ್ಯಮ ವರದಿಗಳ ಪ್ರಕಾರ, ಹೆಲಿಕಾಪ್ಟರ್‌ನಲ್ಲಿದ್ದ ಶಹಾ ಆಲಂ ಎನ್ನುವ ವ್ಯಕ್ತಿ ಮೃತನಾಗಿದ್ದು, ಗಂಭೀರವಾಗಿ ಗಾಯಗೊಂಡ ಹೆಲಿಕಾಪ್ಟರ್ ಪೈಲಟ್ ಶಫಿಕುಲ್ ಇಸ್ಲಾಂ ಸೇರಿದಂತೆ ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ನಾನು ಆರೋಗ್ಯವಾಗಿದ್ದೇನೆ. ಹೆಲಿಕಾಪ್ಟರ್ ದುರಂತದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಆದರೆ, ಅಪಘಾತ ಯಾವ ರೀತಿ ಸಂಭವಿಸಿತು ಎನ್ನುವುದು ನನಗೆ ಗೊತ್ತಿಲ್ಲ ಎಂದು ಶಕೀಬ್ ತಿಳಿಸಿದ್ದಾರೆ.
 
29 ವರ್ಷ ವಯಸ್ಸಿನ ಬಾಂಗ್ಲಾದೇಶದ ಜನಪ್ರಿಯ ಕ್ರಿಕೆಟಿಗರಾದ ಶಕೀಬ್ ಅಲ್ ಹಸನ್, ಐಸಿಸಿ ಟೆಸ್ಟ್ ಆಲ್‌ರೌಂಡರ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಮೊದಲನೇ ಸ್ಥಾನದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ