ಮಿಸ್ಬಾ ಉಲ್ ಹಕ್ ಶತಕದಿಂದ ಚೇತರಿಸಿಕೊಂಡ ಪಾಕಿಸ್ತಾನ

ಶುಕ್ರವಾರ, 15 ಜುಲೈ 2016 (11:59 IST)
ಪಾಕಿಸ್ತಾನ ನಾಯಕ ಮಿಸ್ಬಾಉಲ್ ಹಕ್ ಇಂಗ್ಲೆಂಡ್ ವಿರುದ್ಧ ಶತಕ ಗಳಿಸುವ ಮೂಲಕ 82 ವರ್ಷಗಳಲ್ಲಿ  ಟೆಸ್ಟ್ ಶತಕ ಸ್ಕೋರ್ ಮಾಡಿದ ಅತೀ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಪಾಕಿಸ್ತಾನ ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಮೊದಲ ದಿನ 282ಕ್ಕೆ 6 ವಿಕೆಟ್‌ಗೆ ಉತ್ತರವಾಗಿ ಮಿಸ್ಬಾ ಅಜೇಯ 110 ರನ್ ಗಳಿಸಿದರು.

ಪಾಕಿಸ್ತಾನ 77ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಡಲಿಳಿದ 42 ವರ್ಷದ ಮಿಸ್ಬಾ ಉಲ್ ಹಕ್ ಅಸಾದ್ ಶಫೀಕ್(73) ಜತೆ 5ನೇ ವಿಕೆಟ್‌ಗೆ 148 ರನ್ ಕಲೆಹಾಕಿದರು. ಇಂಗ್ಲೆಂಡ್ ಪರ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಒಂದರ ಹಿಂದೊಂದು ಎರಡು ವಿಕೆಟ್ ಕಬಳಿಸಿದರು.
 
 ವಾರ್ವಿಕ್‌ಶೈರ್ ವೇಗಿ ನೈಟ್‌ವಾಚ್‌ಮನ್ ರಹಾತ್ ಅಲಿಯನ್ನು ಗುರುವಾರದ ಕೊನೆಯ ಎಸೆತದಲ್ಲಿ ಔಟ್ ಮಾಡಿ 18 ಓವರುಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿ 45 ರನ್ ನೀಡಿದರು.
 
 ಆದರೆ ಆಫ್ ಸ್ಪಿನ್ನರ್ ಮೊಯಿನ್ ಅಲಿ 7 ಓವರುಗಳಿಗೆ ಯಾವುದೇ ವಿಕೆಟ್ ಇಲ್ಲದೇ 46 ರನ್ ನೀಡಿ ದುಬಾರಿಯೆನಿಸಿದರು.
1934ರಲ್ಲಿ ಇಂಗ್ಲೆಂಡ್ ಪ್ಯಾಟ್ಸಿ ಹೆಂಡ್ರೆನ್ ತಮ್ಮ 45ನೇ ವರ್ಷ ವಯಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಬಳಿಕ ಮಿಶಬ್ ಶತಕ ಅತೀ ಹಿರಿಯ ವಯಸ್ಸಿನ ಆಟಗಾರ ಗಳಿಸಿದ ಶತಕವಾಗಿದೆ.
 
 ಸ್ಕೋರು ವಿವರ:  
ಪಾಕಿಸ್ತಾನ 282ಕ್ಕೆ 6 ವಿಕೆಟ್, 87 ಓವರುಗಳು)
ಮೊಹಮ್ಮದ್ ಹಫೀಜ್ 40 ರನ್, ಯೂನಿಸ್ ಖಾನ್ 33 ರನ್, ಮಿಸ್ಬಾ ಉಲ್ ಹಕ್ ಅಜೇಯ 110 ರನ್, ಅಸಾದ್ ಶಫೀಕ್ 73 ರನ್.
ಬೌಲಿಂಗ್ ವಿವರ: ಸ್ಟುವರ್ಟ್ ಬ್ರಾಡ್ 1 ವಿಕೆಟ್, ಜೇಕ್ ಬಾಲ್ 1 ವಿಕೆಟ್, ಕ್ರಿಸ್ ವೋಕ್ಸ್ 4 ವಿಕೆಟ್.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ