ವಿಶ್ವಕಪ್ ಟ್ರೋಫಿ ಮೇಲೆ ಮತ್ತೊಮ್ಮೆ ಕಾಲಿಡುತ್ತೇನೆ, ಏನಿವಾಗ? ಮಿಚೆಲ್ ಮಾರ್ಷ್ ಉದ್ಧಟತನ

ಶುಕ್ರವಾರ, 1 ಡಿಸೆಂಬರ್ 2023 (16:40 IST)
ರಾಯ್ಪುರ: ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಫೋಟೋ ಬಗ್ಗೆ ಕೊನೆಗೂ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಷ್‍ ಪ್ರತಿಕ್ರಿಯಿಸಿದ್ದಾರೆ.

ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡದ ಸೆಲೆಬ್ರೇಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪೈಕಿ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲೆತ್ತಿ ಹಾಕಿ, ಬಿಯರ್ ಬಾಟಲ್ ಹಿಡಿದು ಕುಳಿತು ಪೋಸ್ ಕೊಟ್ಟ ಫೋಟೋ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ವಿಶ್ವಕಪ್ ಟ್ರೋಫಿಗೆ ಅದರದ್ದೇ ಆದ ಘನತೆಯಿದೆ. ಆದರೆ ಅದರ ಮೇಲೆ ಕಾಲೆತ್ತಿ ಕೂರುವಷ್ಟು ದುರಂಹಕಾರ ತೋರಿಸಿದ ಮಿಚೆಲ್ ಮಾರ್ಷ್ ಗೆ ನೆಟ್ಟಿಗರು ತಪರಾಕಿ ನೀಡಿದ್ದರು. ಇದೀಗ ಮಿಚೆಲ್ ಮಾರ್ಷ್ ಆ ಫೋಟೋ ಬಗ್ಗೆ ಮತ್ತೆ ದುರಂಹಕಾರದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

‘ಆ ಫೋಟೋದಲ್ಲಿ ಎಲ್ಲೂ ಟ್ರೋಫಿಗೆ ಅಗೌರವ ತೋರಿದಂತೆ ಕಾಣುತ್ತಿಲ್ಲ. ಇದರ ಬಗ್ಗೆ ನಾನು ಅತಿಯಾಗಿ ಯೋಚಿಸಲ್ಲ. ಮತ್ತೊಮ್ಮೆ ಇದೇ ರೀತಿ ನಾನು ಮಾಡಬಹುದು. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ದುರಂಹಕಾರದ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ