ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮಿಥಾಲಿ ರಾಜ್

ಮಂಗಳವಾರ, 3 ಸೆಪ್ಟಂಬರ್ 2019 (16:01 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸಚಿನ್ ತೆಂಡುಲ್ಕರ್ ಎಂದೇ ಜನಜನಿತವಾಗಿದ್ದ ಮಿಥಾಲಿ ರಾಜ್ ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.


ಅವರು ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಬಗ್ಗೆ ಕಳೆದ ಕೆಲವು ದಿನಗಳಿಂದಲೂ ಸುದ್ದಿ ಹರಿದಾಡುತ್ತಿತ್ತು. ಈಗ ಅವರೇ ಘೋಷಣೆ ಮಾಡಿದ್ದಾರೆ. ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡ ಘೋಷಣೆ ಮಾಡುವ ಕೆಲವೇ ಕ್ಷಣಗಳ ಮೊದಲು ಮಿಥಾಲಿ ತಮ್ಮ ನಿರ್ಧಾರ ಘೋಷಿಸಿದ್ದಾರೆ.

ತನ್ನ ಮುಂದಿನ ಗುರಿ 2021 ರ ಏಕದಿನ ವಿಶ್ವಕಪ್ ಆಡುವುದೇ ತನ್ನ ಗುರಿ ಎಂದು ಮಿಥಾಲಿ ಹೇಳಿಕೊಂಡಿದ್ದಾರೆ. ಒಟ್ಟು 89 ಟಿ20 ಪಂದ್ಯ ಆಡಿರುವ ಅವರು 17 ಅರ್ಧಶತಕಗಳೊಂದಿಗೆ 2364 ರನ್ ಗಳಿಸಿದ್ದಾರೆ. ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ