ಪಾಕಿಸ್ತಾನ ಕ್ರಿಕೆಟಿಗರನ್ನು ಹೊಗಳಿ ಸಂಕಷ್ಟಕ್ಕೀಡಾದ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಕೈಫ್
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ ತಂಡಕ್ಕೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದ ಮೊಹಮ್ಮದ್ ಕೈಫ್ ವಿಶೇಷವಾಗಿ ಪಾಕ್ ಕ್ರಿಕೆಟಿಗ ಫಕಾರ್ ಝಮನ್ ಬಗ್ಗೆ ಹೊಗಳಿಕೆ ನೀಡಿದ್ದರು.
ಇದನ್ನು ನೋಡಿದ ಟ್ವಿಟರಿಗರು ಕೈಫ್ ರನ್ನು ದೇಶ ದ್ರೋಹಿ ಎಂದು ಜರೆದಿದ್ದಾರೆ. ಕೆಲವರು ಪಾಕಿಸ್ತಾನ ಗೆದ್ದರೆ ನೀವೇಕೆ ಇಷ್ಟು ಖುಷಿ ಪಡಬೇಕು ಎಂದು ಪ್ರಶ್ನೆ ಮಾಡಿದ್ದರೆ, ಇನ್ನು ಕೆಲವರು ನಿಮ್ಮಿಂದ ಈ ಪಾಕ್ ಪ್ರೇಮ ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದ್ದಾರೆ. ಅಂತೂ ಪಾಕ್ ತಂಡವನ್ನು ಹೊಗಳಲು ಹೋಗಿ ಕೈಫ್ ಚೆನ್ನಾಗಿಯೇ ಉಗಿಸಿಕೊಂಡಿದ್ದಾರೆ.