ಕೊಹ್ಲಿಯ ಐವರು ಬೌಲರುಗಳ ಸಿದ್ಧಾಂತಕ್ಕೆ ಬೆಂಬಲಿಸಿದ ಮೊಹಮ್ಮದ್ ಶಮಿ

ಮಂಗಳವಾರ, 9 ಆಗಸ್ಟ್ 2016 (16:27 IST)
ಐದು ವಿಶೇಷ ಬೌಲರುಗಳೊಂದಿಗೆ ಆಡಿದ್ದರೂ ಭಾರತಕ್ಕೆ ವಿಂಡೀಸ್ ವಿರುದ್ಧ 2ನೇ  ಟೆಸ್ಟ್‌ನಲ್ಲಿ ಜಯ ದಕ್ಕಿರಲಿಲ್ಲ. ಆದರೆ ವೇಗಿ ಮೊಹಮ್ಮದ್ ಶಮಿ ತಮ್ಮ ನಾಯಕ ವಿರಾಟ್ ಕೊಹ್ಲಿ ಸಿದ್ಧಾಂತಕ್ಕೆ ಅನುಮೋದನೆ ನೀಡಿ, ಬೌಲರುಗಳು ಇದರಿಂದ ಹೆಚ್ಚು ಫಲದಾಯಕವಾಗಿರುತ್ತಾರೆಂದು ತಿಳಿಸಿದರು.  ಎರಡನೇ ಟೆಸ್ಟ್ ಬುಧವಾರ ಮುಕ್ತಾಯವಾದ  3ದಿನಗಳ ಅಂತರದ ಬಳಿಕ ಭಾನುವಾರ ಭಾರತದ ಆಟಗಾರರು ಡೆರೆನ್ ಸಾಮಿ ಸ್ಟೇಡಿಯಂನಲ್ಲಿ ನೆಟ್ ಅಭ್ಯಾಸ ಮಾಡಿದರು.
 
 ಇದಾದ ಬಳಿಕ ಶಮಿ ಐವರು ಬೌಲರುಗಳ ದಾಳಿಗೆ ಮತ್ತು ಕೆಳಕ್ರಮಾಂಕದ ವಿಕೆಟ್‌ಗಳನ್ನು ಉರುಳಿಸುವಲ್ಲಿ ಗಮನವಹಿಸಬೇಕಾದ ಅಗತ್ಯ ಕುರಿತು ಹೇಳಿದರು. ವೇಗದ ಬೌಲರಾಗಿ ನಾವು ಹೆಚ್ಚು ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ ಎಂದು ಶಮಿ ಹೇಳಿದರು.
ವೇಗಿಗಳು ಒಂದು ಬಾರಿಗೆ 4-5 ಓವರುಗಳನ್ನು ಬೌಲ್ ಮಾಡುತ್ತಾರೆ. ಐವರು ಬೌಲರುಗಳಿದ್ದರೆ, 8-10 ಹೆಚ್ಚು ಓವರುಗಳ ವಿಶ್ರಾಂತಿ ಸಿಗುತ್ತದೆ. ಆದ್ದರಿಂದ ಅದರ ಫಲವಾಗಿ ಬೌಲಿಂಗ್ ಲಯವು ಉತ್ತಮಗೊಂಡು ಹೆಚ್ಚು ಪ್ರಯತ್ನ ಸಾಧ್ಯವಾಗುತ್ತದೆ.

ಇಬ್ಬರು ಸ್ಪಿನ್ನರುಗಳು ಮತ್ತು ಮೂವರು ವೇಗಿಗಳು ಇರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು ಈ ಸಂಯೋಜನೆ ಮುಂದುವರಿಯಲು ನಾವು ಇಷ್ಟಪಡುತ್ತೇವೆ ಎಂದು ಶಮಿ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ