ಗೃಹಹಿಂಸೆ ಪ್ರಕರಣ: ಇನ್ನೂ ಭಾರತಕ್ಕೆ ಮರಳದ ಕ್ರಿಕೆಟಿಗ ಮೊಹಮ್ಮದ್ ಶಮಿ

ಭಾನುವಾರ, 8 ಸೆಪ್ಟಂಬರ್ 2019 (07:15 IST)
ಕೋಲ್ಕೊತ್ತಾ: ಪತ್ನಿಗೆ ಗೃಹಹಿಂಸೆ ನೀಡಿದ ಪ್ರಕರಣದಲ್ಲಿ ಕೋಲ್ಕೊತ್ತಾದ ಸ್ಥಳೀಯ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಇನ್ನೂ ಭಾರತಕ್ಕೆ ಮರಳಬೇಕಿದೆ.


ವೆಸ್ಟ್ ಇಂಡೀಸ್ ಸರಣಿ ಮುಗಿದ ಬಳಿಕ ಶಮಿ ನೇರವಾಗಿ ಅಮೆರಿಕಾಗೆ ತೆರಳಿದ್ದಾರೆ ಎನ್ನಲಾಗಿದೆ. ಕೋರ್ಟ್ ಮುಂದೆ ಹಾಜರಾಗಲು ಶಮಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಮೂಲಗಳ ಪ್ರಕಾರ ಶಮಿ 12 ಕ್ಕೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ಅಮೆರಿಕಾದಲ್ಲಿದ್ದರೂ ತಮ್ಮ ಲಾಯರ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ಮರಳಿದ ಕೂಡಲೇ ಕೋರ್ಟ್ ಮುಂದೆ ಹಾಜರಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ