ಮೊದಲ ಬಾರಿಗೆ ಅನುಷ್ಕಾರನ್ನು ಭೇಟಿಯಾದಾಗ ವಿರಾಟ್ ಕೊಹ್ಲಿ ಹೀಗೆ ಜೋಕ್ ಮಾಡಿದ್ದರಂತೆ!

ಶುಕ್ರವಾರ, 6 ಸೆಪ್ಟಂಬರ್ 2019 (09:48 IST)
ಜಮೈಕಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ಮೊದಲ ಬಾರಿಗೆ ಭೇಟಿಯಾದಾಗ ಏನು ಹೇಳಿದ್ದರು ಗೊತ್ತೇ?


ಇದನ್ನು ಕೊಹ್ಲಿ ವಾಹಿನಿಯೊಂದರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಅನುಷ್ಕಾರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಶ್ಯಾಂಪೂ ಜಾಹೀರಾತೊಂದರ ಚಿತ್ರೀಕರಣದಲ್ಲಿ ಈಗಾಗಲೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಇವರಿಬ್ಬರ ನಡುವೆ ನಡೆದ ಮೊದಲ ಸಂಭಾಷಣೆ ಏನು ಗೊತ್ತಾ?

‘ಜಾಹೀರಾತು ಚಿತ್ರೀಕರಣಕ್ಕೆ ಬಂದಾಗ ನಮಗೆ ಪರಸ್ಪರ ಪರಿಚಯವಿರಲಿಲ್ಲ. ಆದರೆ ನಾನು ಕೊಂಚ ನರ್ವಸ್ ಆಗಿದ್ದೆ. ಹಾಗಿದ್ದರೂ ಸಹಜವಾಗಿರಲು ಜೋಕ್ ಮಾಡೋಣವೆಂದುಕೊಂಡೆ. ಆವತ್ತು ಅನುಷ್ಕಾ ಹೈ ಹೀಲ್ಡ್ ಚಪ್ಪಲಿ ಧರಿಸಿ ಬಂದಿದ್ದರು. ಅದರಿಂದಾಗಿ ಅವರು ನನಗಿಂತ ಉದ್ದವಾಗಿ ಕಾಣುತ್ತಿದ್ದರು. ಯಾರೋ ಅವಳಿಗೆ ನಾನು ಹೆಚ್ಚು ಉದ್ದವಿಲ್ಲ ಎಂದಿದ್ದರು. ಅವಳನ್ನು ನೋಡಿ ನಾನು ಯಾಕೆ ನಿನಗೆ ಇದಕ್ಕಿಂತ ಹೀಲ್ಡ್ ಚಪ್ಪಲಿ ಸಿಗಲಿಲ್ಲವೇ ಎಂದು ತಮಾಷೆ ಮಾಡಿದೆ.ಅವಳಿಗೆ ಅದು ಇಷ್ಟವಾಗಲಿಲ್ಲವೇನೋ. ಎಕ್ಸ್ ಕ್ಯೂಸ್ ಮಿ ಎನ್ನುವ ಹಾಗೆ ನನ್ನ ಕಡೆ ದಿಟ್ಟಿಸಿ ನೋಡಿದಳು. ನಾನು ಇಲ್ಲ ತಮಾಷೆ ಮಾಡಿದೆ ಎಂದು ಮಾತು ಹಾರಿಸಿದೆ’ ಎಂದು ವಿರಾಟ್ ಅಂದಿನ ಘಟನೆಯನ್ನು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ