ರಣಜಿ ಟ್ರೋಫಿ ಆಡಿಸುವುದೇಕೆ? ಟೀಂ ಇಂಡಿಯಾಗೆ ಅವಕಾಶ ಸಿಗದೇ ಇದ್ದಕ್ಕೆ ಸಿಟ್ಟುಹೊರಹಾಕಿದ ಕ್ರಿಕೆಟಿಗ
ಧೋನಿಯಿಂತ ತೆರವಾದ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಗೆ ಮಣೆ ಹಾಕಲಾಗಿದೆ. ಅಷ್ಟೇ ಅಲ್ಲದೆ, ಟೀಂ ಇಂಡಿಯಾಗೆ ಯುವ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದ್ದರೂ ಸೌರಾಷ್ಟ್ರ ತಂಡವನ್ನು ಕಡೆಗಣಿಸಲಾಗುತ್ತಿದೆ. ರಣಜಿ ಟ್ರೋಫಿ ಫೈನಲ್ ವರೆಗೆ ಆಡಿದ ತಂಡವಾಗಿದ್ದರೂ ಸೌರಾಷ್ಟ್ರದ ಯಾವ ಆಟಗಾರನಿಗೂ ಟೀಂ ಇಂಡಿಯಾದಲ್ಲಿ ಅವಕಾಶವಿಲ್ಲ. ಕೇವಲ ಭಾರತ ಎ ತಂಡದಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಶೆಲ್ಡನ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ತಾರತಮ್ಯ ಪ್ರಶ್ನಿಸಿದ್ದಾರೆ.