ಭಾರತದ ಮೊದಲ ನಸುಗೆಂಪು ಚೆಂಡಿನ ಪಂದ್ಯದಲ್ಲಿ ಸಹಾ, ಶಮಿ ಅನುಭವ

ಶನಿವಾರ, 18 ಜೂನ್ 2016 (12:00 IST)
ಸ್ಥಳೀಯ ದೈತ್ಯ ಕ್ರಿಕೆಟ್ ತಂಡಗಳಾದ ಮೊಹನ್ ಬಾಗನ್ ಮತ್ತು ಬೊವಾನಿಪುರ್ ಕ್ಲಬ್ ನಡುವೆ ಬಂಗಾಳದ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲಿ ಮಹಮ್ಮದ್ ಶಮಿ ಮತ್ತು ವೃದ್ಧಿಮಾನ್ ಸಹಾ ಅವರು ನಸುಗೆಂಪು ಚೆಂಡಿನಲ್ಲಿ ಹಗಲು ರಾತ್ರಿ ಪಂದ್ಯದಲ್ಲಿ ಪ್ರಥಮ ಅನುಭವ ಪಡೆಯುತ್ತಿರುವ ಭಾರತದ ಆಟಗಾರರು.

ಭಾರತದ ಮಾಜಿ ನಾಯಕ ಗಂಗೂಲಿಯ ಕನಸಿನ ಕೂಸಾದ ನಾಲ್ಕು ದಿನಗಳ ಹಗಲು ರಾತ್ರಿ ಫೈನಲ್ ಪಂದ್ಯವು ಐತಿಹಾಸಿಕ ವಿದ್ಯಮಾನವಾಗಿದ್ದು, ನಸುಗೆಂಪು ಕೂಕಾಬುರಾ ಚೆಂಡಿನಲ್ಲಿ ಉಪ ಖಂಡೀಯ ಪಿಚ್ ಪರಿಸ್ಥಿತಿಗಳಲ್ಲಿ ಫ್ಲಡ್‌ಲೈಟ್ ಪಂದ್ಯದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬ ಒಳನೋಟವನ್ನು ಇದು ಒದಗಿಸುತ್ತದೆ.  ಈ ಪ್ರಯೋಗ ಯಶಸ್ವಿಯಾದರೆ, ಗಂಗೂಲಿ ಸಹಯೋಗದಿಂದ ಬಿಸಿಸಿಐ ಭಾರತದಲ್ಲಿ ಪ್ರಪ್ರಥಮ ನಸುಗೆಂಪು ಚೆಂಡಿನ ಟೆಸ್ಟ್ ಪಂದ್ಯ ಆಯೋಜಿಸಲು ಯೋಜಿಸಿದೆ.

ಭಾರತದ ಪೇಸ್ ಬೌಲರ್ ಮತ್ತು ಮೋಹನ್ ಬಾಗನ್ ಶಮಿ ನಸುಗೆಂಪು ಕೂಕಾಬುರಾ ಚೆಂಡಿನ ಅನುಭವವನ್ನು ಪಡೆಯುವ ತಂಡದ ಮೊದಲಿಗರಾಗಲಿದ್ದಾರೆ. ವೃದ್ಧಿಮಾನ್ ಸಹಾ ಅವರು ಕೂಕಾಬುರಾ ಚೆಂಡಿನೊಂದಿಗೆ ಫ್ಲಡ್‌ಲೈಟ್ ಅಡಿಯಲ್ಲಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಅನುಭವ ಪಡೆ
ಯಲಿದ್ದಾರೆ. 

ದುಲೀಪ್ ಟ್ರೋಫಿ ಪಂದ್ಯವನ್ನು ಫ್ಲಡ್‌ಲೈಟ್‌ನಲ್ಲಿ ಆಡುವುದಕ್ಕೆ ಮುಂಚೆ, ಭಾರತದ ಟಾಪ್ ಆಟಗಾರರಿಗೆ ಇವರಿಬ್ಬರು ಆಟಗಾರರು ಮಾಹಿತಿ ಒದಗಿಸಬಹುದು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ