ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

Sampriya

ಭಾನುವಾರ, 19 ಅಕ್ಟೋಬರ್ 2025 (11:11 IST)
Photo Credit X
ಮುಂಬೈ: ಭಾರತ ಮಹಿಳಾ ತಂಡದ ಸ್ಟಾರ್‌ ಬ್ಯಾರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಸಂಗೀತ ನಿರ್ದೇಶಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರನ್ನು ಮದುವೆಯಾಗಲಿದ್ದಾರೆ. 

ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಇಂದೋರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಇಂದು ಭಾರತ ತಂಡವು ಆಡಲಿದೆ. ಇದಕ್ಕೂ ಮುನ್ನ ದಿನ ಪಲಾಶ್ ಅವರು ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ. ಮಂದಾನ ಇಂದೋರ್‌ನ ಸೊಸೆಯಾಗಲಿದ್ದಾರೆ ಎನ್ನುವ ಮೂಲಕ ಮದುವೆಯ ಬಗ್ಗೆ ಇದ್ದ ವದಂತಿಗೆ ತೆರೆ ಎಳೆದಿದ್ದಾರೆ.

ಸ್ಮೃತಿ ಮಂದಾನ ಶೀಘ್ರದಲ್ಲೇ ಇಂದೋರ್‌ನ ಸೊಸೆಯಾಗಲಿದ್ದಾರೆ. ಮಹಿಳಾ ವಿಶ್ವಕಪ್‌ನಲ್ಲಿ ಇಂದೋರ್‌ನಲ್ಲಿ ನಡೆಯುವ ಪಂದ್ಯದ ಮುನ್ನಾ ದಿನದಂದು ಪಲಾಶ್ ಮುಚ್ಚಲ್ ಘೋಷಣೆ ಮಾಡಿದ್ದಾರೆ. 

ಮಂದಾನ ಮತ್ತು ಪಲಾಶ್‌ ಅವರು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಆದರೆ ಪಲಾಶ್ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಖಚಿತಪಡಿಸಿದ್ದು ಇದೇ ಮೊದಲು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಲಾಶ್‌, 30 ವರ್ಷದ ಮಂದಾನ ಅವರನ್ನು ಶೀಘ್ರದಲ್ಲೇ ಪರಸ್ಪರ ಮದುವೆಯಾಗುವುದಾಗಿ ಪಲಾಶ್‌ ಹೇಳಿದ್ದಾರೆ. ಅವರು ಶೀಘ್ರದಲ್ಲೇ ಇಂದೋರ್‌ನ ಸೊಸೆಯಾಗುತ್ತಾರೆ. ನಾನು ಹೇಳಲು ಬಯಸುತ್ತೇನೆ ಅಷ್ಟೆ. ನಾನು ನಿಮಗೆ ಶೀರ್ಷಿಕೆಯನ್ನು ನೀಡಿದ್ದೇನೆ ಎಂದು ಹೇಳಿದರು.

ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ಇಂಗ್ಲೆಂಡ್ ವಿರುದ್ಧ ಮುಂಬರುವ ನಿರ್ಣಾಯಕ ಹಣಾಹಣಿಗಾಗಿ ಪಲಾಶ್ ಮುಚ್ಚಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದರು. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ (ಮಂಧಾನ) ಅವರಿಗೆ ನನ್ನ ಶುಭಾಶಯಗಳು. ಭಾರತ ಕ್ರಿಕೆಟ್ ತಂಡವು ಪ್ರತಿ ಪಂದ್ಯವನ್ನು ಗೆದ್ದು ದೇಶಕ್ಕೆ ಕೀರ್ತಿ ತರಬೇಕೆಂದು ನಾವು ಯಾವಾಗಲೂ ಬಯಸುತ್ತೇವೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ