ಮೊಹಮ್ಮದ್ ಸಿರಾಜ್ ಯಾರ್ಕರ್ ನಿಂದ ಇವರೆಲ್ಲರ ವೃತ್ತಿ ಜೀವನ ಬಚಾವ್ ಆಯ್ತು

Krishnaveni K

ಮಂಗಳವಾರ, 5 ಆಗಸ್ಟ್ 2025 (08:41 IST)
Photo Credit: X
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಭಾರತ ರೋಚಕವಾಗಿ 6 ರನ್ ಗಳಿಂದ ಗೆಲ್ಲಲು ಸಾಧ್ಯವಾಗಿದ್ದು ಮೊಹಮ್ಮದ್ ಸಿರಾಜ್ ರ ಆ ಕೊನೆಯ ಯಾರ್ಕರ್ ಎಸೆತ. ಆದರೆ ಈ ಎಸೆತದಿಂದ ಎಷ್ಟು ಜನರ ವೃತ್ತಿ ಜೀವನ ಬಚಾವ್ ಆಯ್ತು ನೋಡಿ.

ಐದನೇ ಟೆಸ್ಟ್ ಪಂದ್ಯವನ್ನು ಭಾರತ ಸೋಲುತ್ತಿದ್ದರೆ ಸರಣಿ ಕಳೆದುಕೊಳ್ಳಬೇಕಾಗಿತ್ತು. ಇದಿಷ್ಟೇ ಅಲ್ಲ, ಈ ಸರಣಿ ಸೋತಿದ್ದರೆ ಭಾರತ ತಂಡದಲ್ಲಿ ಹಲವು ಬದಲಾವಣೆಗಳಾಗುತ್ತಿತ್ತು. ಯಾಕೆಂದರೆ ಇದಕ್ಕೆ ಮೊದಲು ನಡೆದಿದ್ದ ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನೂ ಭಾರತ ಸೋತಿತ್ತು.

ಈ ಪಂದ್ಯ ನಿನ್ನೆಯ ತನಕ ಭಾರತ ಸೋಲಿನ ಅಂಚಿನಲ್ಲಿತ್ತು. ಆಗ ಕೋಚ್ ಗೌತಮ್ ಗಂಭೀರ್ ಟೆಸ್ಟ್ ಮಾದರಿಗೆ ಲಾಯಕ್ಕಿಲ್ಲ ಎಂದು ಟೀಕೆಗಳು ಬಂದಿದ್ದವು. ಒಂದು ವೇಳೆ ಈ ಸರಣಿಯನ್ನೂ ಸೋತಿದ್ದರೆ ಬಿಸಿಸಿಐ ಟೆಸ್ಟ್ ಮಾದರಿಗೆ ಬೇರೆ ಕೋಚ್ ಬಗ್ಗೆ ಚಿಂತನೆ ನಡೆಸುತ್ತಿತ್ತು. ಆದರೆ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಗೆಲುವಿಗೆ 6 ರನ್ ಬಾಕಿಯಿದ್ದಾಗ ಎಸೆದ ಯಾರ್ಕರ್ ನಿಂದ ಅಟ್ಕಿಸನ್ ಔಟಾಗಿ ತೆರಳಿದರು.

ಕೇವಲ ಗಂಭೀರ್ ಮಾತ್ರವಲ್ಲ,ಕನ್ನಡಿಗ ಕರುಣ್ ನಾಯರ್ ಪಾಲಿಗೆ ಇದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುತ್ತಿತ್ತು. ಆದರೆ ಈ ಒಂದು ಗೆಲುವಿನ ಕಾರಣ ಅವರಿಗೆ ಇನ್ನೊಂದು ಸರಣಿಯಲ್ಲಿ ಅವಕಾಶ ಸಿಗಬಹುದು. ಇನ್ನೊಬ್ಬ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿ ತಮ್ಮ ಸ್ಥಾನ ಉಳಿಸಿಕೊಂಡರು. ಆದರೆ ಒಂದು ಗೆಲುವು ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರಲ್ಲಾ? ಹಾಗೆಯೇ ಈ ಒಂದು ಯಾರ್ಕರ್ ಎಸೆತದಿಂದ ಭಾರತ ಗೆಲುವು ಸಾಧಿಸಿದ್ದರಿಂದ ಇವರೆಲ್ಲರ ಟೆಸ್ಟ್ ವೃತ್ತಿ ಜೀವನ ಉಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ