ಕ್ರಿಕೆಟ್ ಡಿಆರ್‌ಎಸ್‌ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಸಾಧ್ಯತೆ

ಶುಕ್ರವಾರ, 10 ಜೂನ್ 2016 (19:29 IST)
ಕ್ರಿಕೆಟ್ ವಿವಾದಾತ್ಮಕ ತೀರ್ಪು ಮರುಪರಿಶೀಲನೆ ವ್ಯವಸ್ಥೆ(ಡಿಆರ್‌ಎಸ್ )ಯಲ್ಲಿ ಬ್ಯಾಟ್ಸ್‌ಮನ್‌ಗೆ ಬೆನಿಫಿಟ್ ಆಫ್ ಡೌಟ್ ನೀಡುವುದನ್ನು ಶೀಘ್ರದಲ್ಲೇ ಅರ್ಧಕ್ಕೆ ಇಳಿಸುವ ಸಾಧ್ಯತೆಯಿರುತ್ತದೆ. ಪ್ರಸಕ್ತ ಎಲ್‌ಬಿಡಬ್ಲ್ಯು ತೀರ್ಪು ನೀಡಲು ಬಲ ಅಥವಾ ಎಡ ಸ್ಟಂಪ್‌ಗೆ ಚೆಂಡಿನ ಅರ್ಧಭಾಗ ತಾಗಿದರೆ ಮಾತ್ರ ಮೂರನೇ ಅಂಪೈರ್ ಬೌಲರ್ ಪರವಾಗಿ ತೀರ್ಪನ್ನು ನೀಡುತ್ತಾರೆ.

ಆದಾಗ್ಯೂ, ಮಾಜಿ ಶ್ರೀಲಂಕಾ ನಾಯಕ ಜಯವರ್ದನೆ ಐಸಿಸಿ ಕ್ರಿಕೆಟ್ ಸಮಿತಿಯಲ್ಲಿದ್ದು, ಈ ನಿಯಮಕ್ಕೆ ಬದಲಾವಣೆಯನ್ನು ಚರ್ಚಿಸಲಾಗಿದ್ದು, ಆಡಳಿತ ಮಂಡಳಿಗೆ ಇದನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ.
 
 ಶೇ. 50ರಷ್ಟು ನಿಯಮವನ್ನು ಶೇ. 25ಕ್ಕೆ ಇಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಜಯವರ್ದನೆ ತಿಳಿಸಿದರು.  ಎಂಸಿಸಿ ನಿಯಮ ಪುಸ್ತಕದಲ್ಲಿ ಕೂಡ ಚೆಂಡು ಸ್ಟಂಪನ್ನು  ತಾಗಿದರೆ ನಾಟೌಟ್ ತೀರ್ಪನ್ನು ತಳ್ಳಿಹಾಕಬೇಕೆಂದು ತಿಳಿಸಿದೆ. ಹೊಸ ನಿಯಮದಡಿ ಶೇ. 25ರಷ್ಟು ಚೆಂಡು ವಿಕೆಟ್‌ಗೆ ತಾಗಿದರೂ ಕೂಡ ತೀರ್ಪನ್ನು ತಳ್ಳಿಹಾಕಬೇಕು ಎಂದಿದೆ.
 
 ಇಂಗ್ಲೆಂಡ್ ಮತ್ತು ಶ್ರೀಲಂಕಾದ ಮೂರನೇ ಟೆಸ್ಟ್ ಪಂದ್ಯದ ಆರಂಭದ ದಿನ ಈ ವಿಷಯ ಮತ್ತೆ ಬೆಳಕಿಗೆ ಬಂದಿದ್ದು, ಜಾನಿ ಬೇರ್ ಸ್ಟೋ 57 ರನ್‌ಗಳಾಗಿದ್ದಾಗ ಬಿಗಿಯಾದ ರಿವ್ಯೂನಿಂದ ಬಚಾವಾದರು. ಅರ್ಧಕ್ಕಿಂತ ಸ್ವಲ್ಪ ಕಡಿಮೆ ಚೆಂಡು ಸ್ಟಂಪ್‌ಗೆ ತಾಗಿದ್ದು ಬೈರ್‌‍ಸ್ಟೋಗೆ ಅಂಪೈರ್ ನಾಟೌಟ್ ನೀಡಿದ್ದರು. ಈ ತೀರ್ಪು ಪುನರ್ಪರಿಶೀಲನೆಯಲ್ಲಿ ಕೂಡ ಥರ್ಡ್ ಅಂಪೈರ್ ತೀರ್ಪನ್ನು ಎತ್ತಿಹಿಡಿದಿದ್ದರು. 
 
ಇದರಿಂದ ಜಯವರ್ದನೆ ಅವರ ಸಹಆಟಗಾರ ಮತ್ತು ಸ್ನೇಹಿತ ಕುಮಾರ್ ಸಂಗಕ್ಕರಾ ಬೇಸರಗೊಂಡಿದ್ದರು. ಈ ತೀರ್ಪಿನಿಂದ ಜೀವದಾನ ಪಡೆದ ಬೈರ್‌ಸ್ಟೋ 107 ರನ್ ಶತಕ ಸಿಡಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ