ಕಳೆದುಕೊಂಡ ಪ್ರಿಯತಮೆಯನ್ನು ನೆನೆದು ಕಣ್ಣೀರಾದ ಧೋನಿ

ಶನಿವಾರ, 17 ಸೆಪ್ಟಂಬರ್ 2016 (13:09 IST)
ಭಾರತ ಟೆಸ್ಟ್  ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚಿಗೆ ಚಿತ್ರಮಂದಿರದಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳ ಹತ್ತಿದ್ದರಂತೆ. ಕಾರಣ ಅಲ್ಲಿ ಅವರು ತಮ್ಮ  ಮಾಜಿ ಪ್ರಿಯತಮೆಯನ್ನು ನೋಡಿದರಂತೆ. ಆಕೆಯನ್ನು ನೆನಪಿಸಿಕೊಂಡು ತಡೆಯದಾದರಂತೆ. ಹೌದು ಪ್ರಥಮ ಪ್ರೀತಿಯೇ ಹಾಗೆ. ಎಂದಿಗೂ ಅಳಸದ ಗಾಯ, ಮರೆಯಲಾಗದ ನೆನಪನ್ನು ಬಿಟ್ಟು ಹೋಗಿರುತ್ತದೆ. ಧೋನಿಗಾಗಿದ್ದು ಅದೇ. 
 
ಧೋನಿ ಜೀವನ ಚರಿತ್ರೆ ಸಿನಿಮಾ ಆಗುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. 'ದಿ ಅನ್ ಟೋಲ್ಡ್ ಸ್ಟೋರಿ', ಪ್ರೊಮೋ ನೋಡಲು ಹೋಗಿದ್ದ ಧೋನಿ ಒಂದು ಕ್ಷಣ ತಮ್ಮನ್ನು ತಾವು ಕಳೆದುಕೊಂಡರು. ಅಕಾಲಿಕ ಮರಣವನ್ನಪ್ಪಿದ ತಮ್ಮ ಗೆಳತಿಯ ಪಾತ್ರ ತೆರೆಯ ಮೇಲೆ ಬರುತ್ತಿದ್ದಂತೆ ತಮ್ಮನ್ನು ತಾವು ನಿಯಂತ್ರಿಸದಾದರು. ಅವರ ಸ್ನೇಹಿತರು ಎಷ್ಟು ಸಮಾಧಾನ ಪಡಿಸಲು ಯತ್ನಿಸಿದರೂ ಅವರಿಂದ ನಿಯಂತ್ರಿಸಲಾಗಲಿಲ್ಲ. ಸಹಜ ಸ್ಥಿತಿಗೆ ಮರಳಲು ಅವರಿಗೆ 20 ನಿಮಿಷ ಬೇಕಾಯ್ತು ಎನ್ನುತ್ತಾರೆ ಅವರ ಗೆಳೆಯರು. 
 
ಧೋನಿ ಯಶಸ್ಸಿನ ಹಿಂದಿನ ಪ್ರೇರಣೆಯಾಗಿದ್ದ ಪ್ರಿಯಾಂಕಾ ಝಾ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಈ ಆಘಾತದಿಂದ ಮೇಲೇಳಲಾಗದೆ ಕುಸಿದು ಬಿದ್ದಿದ್ದ ಧೋನಿ ಅಂದು ಕ್ರಿಕೆಟ್ ತೊರೆಯಲು ನಿರ್ಧರಿಸಿದ್ದರಂತೆ. ಬಳಿಕ ತಮ್ಮನ್ನು ತಾವು ಸಾವರಿಸಿಕೊಂಡು ಎದ್ದು ನಿಂತು ಯಶಸ್ಸಿನತ್ತ ದಾಪುಗಾಲು ಹಾಕಿದರು. 
 
ಧೋನಿ ಜೀವನ ಚರಿತ್ರೆಯನ್ನಾಧರಿಸಿದ ಸಿನಿಮಾದಲ್ಲಿ ಮೂಡಿ ಬಂದಿರುವ ಪ್ರಿಯಾಂಕಾ ಝಾ ಪಾತ್ರದಲ್ಲಿ ದಿಶಾ ನಟಿಸಿದ್ದಾರೆ. ಈ ಅನ್ ಟೋಲ್ಡ್ ಪ್ರೇಮ್ ಕಹಾನಿ ಧೋನಿಯನ್ನು ಅಳಿಸಿದ್ದು ಸಹಜ, ಆದರೆ ಎಂತ ಕಲ್ಲು ಹೃದಯವನ್ನು ಕರಗಿಸುವಂತಿದೆ ಇದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ