Mumbai Indians: ಪ್ಲೇ ಆಫ್ ಗೇರಿದ ಖುಷಿಯಲ್ಲಿ ಫ್ಯಾನ್ಸ್ ಗೆ ಮುಂಬೈ ಇಂಡಿಯನ್ಸ್ ಆಟಗಾರರ ಗಿಫ್ಟ್

Krishnaveni K

ಗುರುವಾರ, 22 ಮೇ 2025 (09:50 IST)
Photo Credit: X
ಮುಂಬೈ: ಐಪಿಎಲ್ 2025 ರಲ್ಲಿ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ ಗಳಿಂದ ಗೆದ್ದು ಪ್ಲೇ ಆಫ್ ಗೇರಿದ ಬಳಿಕ ಮುಂಬೈ ಇಂಡಿಯನ್ಸ್ ಆಟಗಾರರು ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮುಂಬೈ 180 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ಲೇ ಆಫ್ ಗೇರಲು ಮುಂಬೈಗೆ ನಿನ್ನೆಯ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.ಮುಂಬೈ: ಐಪಿಎಲ್ 2025 ರಲ್ಲಿ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ ಗಳಿಂದ ಗೆದ್ದು ಪ್ಲೇ ಆಫ್ ಗೇರಿದ ಬಳಿಕ ಮುಂಬೈ ಇಂಡಿಯನ್ಸ್ ಆಟಗಾರರು ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮುಂಬೈ 180 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ಲೇ ಆಫ್ ಗೇರಲು ಮುಂಬೈಗೆ ನಿನ್ನೆಯ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.

ತವರಿನಲ್ಲಿ ಗೆದ್ದು ಪ್ಲೇ ಆಫ್ ಗೇರಿದ ಖುಷಿಯಲ್ಲಿದ್ದ ಮುಂಬೈ ಆಟಗಾರರು ಮೈದಾನಕ್ಕೆ ಸುತ್ತು ಬಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳತ್ತ ಟೆನಿಸ್ ಬಾಲ್ ಎಸೆದು ಉಡುಗೊರೆ ನೀಡಿದ್ದಾರೆ.

ರೋಹಿತ್ ಶರ್ಮಾ ಟೆನಿಸ್ ರಾಕೆಟ್ ಹಿಡಿದು ಅಭಿಮಾನಿಗಳತ್ತ ಬಾಲ್ ಎಸೆದಿದ್ದಾರೆ. ಅವರಿಗೆ ಸಾಥ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಕುಲದೀಪ್ ಯಾದವ್, ಕೋಚ್ ಕೆವಿನ್ ಪೀಟರ್ಸನ್ ತಾವೂ ಬಾಲ್ ಎಸೆದು ಅಭಿಮಾನಿಗಳ ಖುಷಿಪಡಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ