ಮತ್ತೊಮ್ಮೆ ರಣಜಿ ಫೈನಲ್ ನಲ್ಲಿ ಮುಂಬೈ ಕ್ರಿಕೆಟ್ ತಂಡ

ಗುರುವಾರ, 5 ಜನವರಿ 2017 (16:35 IST)
ರಾಜ್ ಕೋಟ್: ಮುಂಬೈ ರಣಜಿ ತಂಡಕ್ಕೆ ಇದೀಗ 42 ನೇ ಬಾರಿ ರಣಜಿ ಗೆಲ್ಲುವ ಅವಕಾಶ. ಪ್ರಬಲ ಮುಂಬೈ ಮುಂದೆ ತಮಿಳುನಾಡು ಆಟ ನಡೆಯಲಿಲ್ಲ. ಪರಿಣಾಮ ಸೆಮಿಫೈನಲ್ ನಲ್ಲಿ 6 ವಿಕೆಟ್ ಗಳಿಂದ ಮುಂಬೈ ಗೆದ್ದು ಫೈನಲ್ ಗೇರಿದೆ.

ಗೆಲುವಿಗೆ 251 ರನ್ ಗಳ ಗುರಿ ಬೆನ್ನತ್ತಿದ್ದ ಮುಂಬೈ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಮುಂಬೈ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಪೃಥ್ವಿ ಶಾ 120 ರನ್ ಗಳಿಸಿದರು. ತಮಿಳುನಾಡು ಪರ ಆಶಿಕ್ ಶ್ರೀನಿವಾಸ್ 2 ವಿಕೆಟ್ ಕಿತ್ತರು.

ವಿಶೇಷವೆಂದರೆ ತಮಿಳುನಾಡು ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿದಾಗ ಡಿಕ್ಲೇರ್ ಮಾಡಿಕೊಂಡಿತ್ತು. ಇದೀಗ ಫೈನಲ್ ನಲ್ಲಿ ಮುಂಬೈ ಗುಜರಾತ್ ತಂಡವನ್ನು ಎದುರಿಸಲಿದೆ.  ಮುಂಬೈ 42 ನೇ ಬಾರಿ ಚಾಂಪಿಯನ್ ಆಗಲು ಹೊರಟರೆ ಬಹಳ ವರ್ಷಗಳ ನಂತರ ಫೈನಲ್ ಗೇರಿರುವ ಗುಜರಾತ್ ಇತಿಹಾಸ ಬರೆಯಲು ಕಾತುರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ