ಟೆಸ್ಟ್‌ನಲ್ಲೂ ಮಿಂಚಿದ ಮುಸ್ತಫಿಜುರ್ ರೆಹಮಾನ್: 37ಕ್ಕೆ ನಾಲ್ಕು ವಿಕೆಟ್

ಮಂಗಳವಾರ, 21 ಜುಲೈ 2015 (20:56 IST)
ಚಿತ್ತಗಾಂಗ್‌‌ನಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದ ವೇಗಿ ಮುಸ್ತಫಿಜುರ್ ರಹಮಾನ್ ಮತ್ತೊಮ್ಮೆ ತಮ್ಮ ಬೌಲಿಂಗ್ ಕೌಶಲ್ಯ ಪ್ರದರ್ಶಿಸುವ ಮೂಲಕ ಕನಸಿನ ಟೆಸ್ಟ್‌ಗೆ ಚೊಚ್ಚಲ ಪ್ರವೇಶ ಪಡೆದಿದ್ದಾರೆ. ರಹಮಾನ್ 37 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಏಕ ದಿನ ಪಂದ್ಯಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದ ಅವರು ಟೆಸ್ಟ್‌ನಲ್ಲಿ ಕೂಡ ಕಡಿಮೆಯಿಲ್ಲ ಎಂದು ತೋರಿಸಿದ್ದಾರೆ.

ಮುಸ್ತಫಿಜುರ್ ಈ ಟೆಸ್ಟ್‌ನಲ್ಲಿ ಒಂದೇ ಓವರಿನಲ್ಲಿ 3 ವಿಕೆಟ್ ಉರುಳಿಸಿದ ಸಾಧನೆ ಮಾಡಿದರು. ಮುಸ್ತಫಿಜುರ್‌ಗೆ ಲೆಗ್ ಸ್ಪಿನ್ನರ್ ಜುಬೈರ್ ಹುಸೇನ್ ಒತ್ತಾಸೆಯಾಗಿ ನಿಂತು 53ಕ್ಕೆ 3 ವಿಕೆಟ್ ಕಬಳಿಸಿದರು. 
 
 ಒಂದು ಹಂತದಲ್ಲಿ ದ.ಆಫ್ರಿಕಾ ಒಂದು ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು. ಆದರೆ ಮುಂದಿನ ಎರಡು ಸೆಷನ್‌ಗಳಲ್ಲಿ ನಾಟಕೀಯ ತಿರುವು ತೆಗೆದುಕೊಂಡು 248 ರನ್‌ಗೆ ಆಲೌಟ್ ಆಗಿದೆ.  ಅಂತಿಮ ಸೆಷನ್‌ನ ಮೂರನೇ ಓವರಿನಲ್ಲಿ ಮುಸ್ತಫಿಜರ್ ನಾಲ್ಕು ಎಸೆತಗಳ ಅಂತರದಲ್ಲಿ ಹಷೀಮ್ ಆಮ್ಲ, ಡುಮಿನಿ ಮತ್ತು ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿ ವಿನಾಶಕಾರಿ ಬೌಲಿಂಗ್ ಪ್ರದರ್ಶನ ಮಾಡಿದರು. 
 
 ಮುಸ್ತಫಿಜುರ್  37ಕ್ಕೆ  4 ವಿಕೆಟ್‌ಗಳೊಂದಿಗೆ ತಮ್ಮ ಬೌಲಿಂಗ್ ಅಂಕಿಅಂಶ ಮುಕ್ತಾಯಗೊಳಿಸಿದರು. ಪ್ರೊಟೀಸ್ ಪ್ರವಾಸದ ಬಹು ಅವಧಿಗೆ ಬಾಂಗ್ಲಾದೇಶದ ವೇಗಿಗಳು ಸ್ಪಿನ್ನರ್‌ಗಳಿಗಿಂತ ಹೆಚ್ಚು ಸಮಸ್ಯೆ ತಂದೊಡ್ಡಿದ್ದಾರೆ.  ಈಗ ದಕ್ಷಿಣ ಆಫ್ರಿಕಾವನ್ನು ಪುನಃ ಹಳಿಗಳ ಮೇಲೆ ತರುವ ಹೊಣೆ ಡೇಲ್ ಸ್ಟೇನ್ ಹೆಗಲಿಗೆ ಬಿದ್ದಿದೆ.  2008ರಲ್ಲಿ ಅವರು ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿದ್ದರೂ ದ.ಆಫ್ರಿಕಾ ಈಗ ಅತ್ಯಂತ ಹುರುಪಿನ, ಬ್ಯಾಟಿಂಗ್ ಸಂಯೋಜನೆಯ ತಂಡವನ್ನು ಎದುರಿಸುತ್ತಿರುವುದು ಸಮಸ್ಯೆಯಾಗಿದೆ. 

ವೆಬ್ದುನಿಯಾವನ್ನು ಓದಿ