KL Rahul: ಕೆಎಲ್ ರಾಹುಲ್ ರನ್ನು ತಂಡದಿಂದ ಕೈ ಬಿಟ್ಟಿದ್ದೇಕೆ ಎಂಬುದೇ ಸೀಕ್ರೆಟ್

Krishnaveni K

ಗುರುವಾರ, 22 ಫೆಬ್ರವರಿ 2024 (09:30 IST)
Photo Courtesy: Twitter
ಮುಂಬೈ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಿಂದ ಕೆಎಲ್ ರಾಹುಲ್ ರನ್ನು ಹೊರಗಿಡಲಾಗಿದೆ. ಹಾಗಿದ್ದರೆ ಅವರನ್ನು ಕೈ ಬಿಡಲು ಫಿಟ್ನೆಸ್ ಸಮಸ್ಯೆಯೇ ಕಾರಣವೇ ಎನ್ನುವುದು ಇನ್ನೂ ರಹಸ್ಯವಾಗಿಯೇ ಇದೆ.

ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾರನ್ನು ಮುಂದಿನ ಟೆಸ್ಟ್ ನಿಂದ ಹೊರಗಿಡಲಾಗಿದೆ. ಈ ಪೈಕಿ ಬುಮ್ರಾಗೆ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಕೆಎಲ್ ರಾಹುಲ್ ಗೆ ಯಾಕೆ ವಿಶ್ರಾಂತಿ ನೀಡಲಾಗಿದೆ ಎನ್ನುವುದು ಖಚಿತವಾಗಿಲ್ಲ. ನಿಜವಾಗಿಯೂ ಫಿಟ್ನೆಸ್ ಸಮಸ್ಯೆಯೇ ಕಾರಣವೇ ಎನ್ನುವುದು ಅನುಮಾನ ಹುಟ್ಟಿಸಿದೆ.

ರಾಜ್ ಕೋಟ್ ಟೆಸ್ಟ್ ಗೆ ಮುನ್ನ ಕೆಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಪ್ರಕಟಿಸಿದ್ದರು. ಈ ಮೂಲಕ ತಾವು ಫಿಟ್ನೆಸ್ ಮರಳಿ ಪಡೆಯುತ್ತಿರುವುದಾಗಿ ಸೂಚನೆ ನೀಡಿದ್ದರು. ಆದರೆ ಆಗ ಶೇ.90 ರಷ್ಟು ಮಾತ್ರ ಫಿಟ್ನೆಸ್ ಸಾಧಿಸಿದ್ದಾರೆ ಎಂದು ತಂಡದಿಂದ ಅವರನ್ನು ಹೊರಗಿಡಲಾಯಿತು. ಆದರೆ ಇದೀಗ ನಾಳೆ ನಡೆಯುವ ಪಂದ್ಯಕ್ಕೆ ಇನ್ನೂ ಒಂದು ವಾರ ಸಮಯವಿತ್ತು. ಆಗಲೂ ರಾಹುಲ್ ಫಿಟ್ನೆಸ್ ಮರಳಿ ಪಡೆಯಲಿಲ್ಲವೇ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.

ಆಂಗ್ಲ ಮಾಧ‍್ಯಮವೊಂದರ ವರದಿ ಪ್ರಕಾರ ಈ ಬಗ್ಗೆ ಬಿಸಿಸಿಐ ಮಾಧ‍್ಯಮ ಸಲಹೆಗಾರರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಗೂ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಮೊದಲ ಟೆಸ್ಟ್ ಬಳಿಕ ರಾಹುಲ್ ತೊಡೆ ನೋವಿಗೊಳಗಾಗಿದ್ದರು. ಇದಾದ ಬಳಿಕ ಇದುವರೆಗೆ ಅವರ ಗಾಯದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹೊರಗಿಟ್ಟಿರುವುದರ ಅಸಲಿಯತ್ತೇನು ಎಂಬುದು ರಹಸ್ಯವಾಗಿಯೇ ಉಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ